ಲಾಲೂ ಪುತ್ರನ ರಾಜೀನಾಮೆಗೆ 4 ದಿನಗಳ ಗಡುವು ನೀಡಿದ ನಿತೀಶ್ – News Mirchi

ಲಾಲೂ ಪುತ್ರನ ರಾಜೀನಾಮೆಗೆ 4 ದಿನಗಳ ಗಡುವು ನೀಡಿದ ನಿತೀಶ್

ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ರಾಜೀನಾಮೆ ನೀಡುವ ಕುರಿತು ಒಂದು ತೀರ್ಮಾನಕ್ಕೆ ಬರುವಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಲಾಲೂ ಪ್ರಸಾದ್ ಯಾದವ್ ಗೆ 4 ದಿನಗಳ ಗಡುವು ನೀಡಿದ್ದಾರೆ ಎನ್ನಲಾಗಿದೆ.

ಇತ್ತಿಚೆಗೆ ಲಾಲೂ ಪ್ರಸಾದ್ ಯಾದವ್ ಮತ್ತು ಅವರ ಕುಟುಂಬ ಸದಸ್ಯರ ಮನೆ ಮೇಲೆ ಸಿಬಿಐ ದಾಳಿ ನಡೆಸಿದ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಜೆಡಿಯು ಶಾಸಕರು, ಸಂಸದರ ಸಭೆ ಕರೆದು ಚರ್ಚೆ ನಡೆಸಿದರು. ತಮ್ಮ ಪಕ್ಷದಲ್ಲಿ ಇಂತಹ ಭ್ರಷ್ಟಾಚಾರ ಆರೋಪಗಳು ಬಂದಿದ್ದ ಪಕ್ಷದಲ್ಲಿ ಕೂಡಲೇ ಕ್ರಮ ಕೈಗೊಳ್ಳುತ್ತಿದ್ದೆ ಎಂದು ಸಭೆಯಲ್ಲಿ ನಿತೀಶ್ ಹೇಳಿದರು ಎನ್ನಲಾಗಿದೆ. ಲಾಲೂ ಪ್ರಸಾದ್ ಯಾದವ್ ಅವರ ಆರ್.ಜೆ.ಡಿ ಪಕ್ಷವು ತೇಜಸ್ವಿಯಾದವ್ ಅವರ ರಾಜೀನಾಮೆ ಕುರಿತು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಪಕ್ಷದ ಶಾಸಕರೆದುರು ಹೇಳಿದ್ದಾರೆ.

ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಆರ್.ಜೆ.ಡಿ ಸೋಮವಾರ ಸ್ಪಷ್ಟಪಡಿಸಿತ್ತು. ತೇಜಸ್ವಿ ಯಾದವ್ ಮೇಲೆ ದೆಹಲಿಯಲ್ಲಿ ಬೇನಾಮಿ ಆಸ್ತಿ ಹೊಂದಿರುವ ಆರೋಪದ ಮೇಲೆ ಎಫ್.ಐ.ಆರ್ ದಾಖಲಾಗಿದೆ.

ಜಿಯೋ ಪ್ರಕಟಿಸಿದ ಹೊಸ ಆಫರ್ ಗಳು

ಭ್ರಷ್ಟಾಚಾರ ಆರೋಪ ಹೊತ್ತಿರುವ ತೇಜಸ್ವಿಯಾದವ್ ಅವರನ್ನು ಉಪಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವಂತೆ ಒತ್ತಾಯಿಸುತ್ತಿದ್ದ ಬಿಜೆಪಿ, ನಿತೀಶ್ ನೇತೃತ್ವದ ಸರ್ಕಾರದಿಂದ ಮೈತ್ರಿ ಪಕ್ಷವಾಗಿರುವ ಆರ್.ಜೆ.ಡಿ ಬೆಂಬಲ ಹಿಂತೆಗೆದುಕೊಂಡರೆ ತಾವು ಹೊರಗಿನಿಂದ ಬೆಂಬಲ ನೀಡುತ್ತೇವೆ ಎಂದು ಹೇಳಿದೆ.

 

Loading...