ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ |News Mirchi

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂಚಲನ ತೀರ್ಮಾನವನ್ನು ಕೈಗೊಂಡಿದ್ದಾರೆ. ಬಿಹಾರ ಮುಖ್ಯಮಂತ್ರಿ ಹುದ್ದೆಗೆ ನಿತೀಶ್ ರಾಜೀನಾಮೆ ನೀಡಿದ್ದಾರೆ. ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿರುವ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜಸ್ವಿಯ ಯಾದವ್ ಅವರ ವರ್ತನೆಯಿಂದ ಬೇಸತ್ತು ಈ ತೀರ್ಮಾನಕ್ಕೆ ಬಂದಿರುವುದಾಗಿ ನಿತೀಶ್ ಕುಮಾರ್ ಬುಧವಾರ ಪ್ರಕಟಿಸಿದ್ದಾರೆ. ತಮ್ಮ ರಾಜೀನಾಮೆಯನ್ನು ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿಯವರಿಗೆ ನೀಡಿರುವುದಾಗಿ ಅವರು ಪ್ರಕಟಿಸಿದ್ದಾರೆ.

ಲಾಲೂ ಪುತ್ರನ ರಾಜೀನಾಮೆಗೆ 4 ದಿನಗಳ ಗಡುವು ನೀಡಿದ ನಿತೀಶ್

ಕೆಲವರ ಕಾರಣದಿಂದಾಗಿ ಸ್ವತಂತ್ರವಾಗಿ ಕೆಲಸ ಮಾಡುವ ವಾತಾವರಣ ಇಲ್ಲಿಲ್ಲ, ಆದ್ದರಿಂದಲೇ ಬಿಹಾರ ರಾಜ್ಯದ ಹಿತದೃಷ್ಟಿಯಿಂದ ರಾಜಿನಾಮೆ ನೀಡುತ್ತಿರುವುದಾಗಿ ಅವರು ವಿವರಿಸಿದರು. ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಸಚಿವ ತೇಜಸ್ವಿ ಯಾದವ್ ರಾಜೀನಾಮೆಗೆ ಒತ್ತಾಯಿಸಿದ್ದ ನಿತೀಶ್ ಕುಮಾರ್, ತೇಜಸ್ವಿ ಯಾದವ್ ಆರೋಪಮುಕ್ತರಾಗಿ ಬರುವಂತೆ ಹೇಳಿದ್ದರು. ಆದರೆ ತೇಜಸ್ವಿಯಾದವ್ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಲಾಲೂ ಪ್ರಸಾದ್ ಯಾದವ್ ಸ್ಪಷ್ಟಪಡಿಸಿದ್ದರು.

ತೇಜಸ್ವಿ ಯಾದವ್ ಮೇಲಿನ ಆರೋಪಗಳಿಗೆ ಸ್ಪಷ್ಟೀಕರಣ ನೀಡುವಂತೆಯೂ ನಿತೀಶ್ ಮನವಿ ಮಾಡಿದ್ದೆ. ಆದರೆ ಲಾಲೂ ಪ್ರಸಾದ್ ಯಾದವ್ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ ಎಂದು ನಿತೀಶ್ ಮಾಧ್ಯಮಗಳಿಗೆ ಹೇಳಿದ್ದಾರೆ. ಕೇಂದ್ರ ಸರ್ಕಾರ ನೋಟು ರದ್ದು ಕ್ರಮ, ಬೇನಾಮಿ ಆಸ್ತಿಗಳಿಗೆ ವಿರುದ್ಧವಾಗಿ ತೆಗೆದುಕೊಂಡ ಕ್ರಮಗಳನ್ನು ನಾನು ಬೆಂಬಲಿಸಿದ್ದೇನೆ. ಹಾಗಿದ್ದಾಗ ನಾನು ಹೇಗೆ ತೇಜಸ್ವಿ ಯಾದವ್ ಮೇಲಿನ ಆರೋಪಗಳನ್ನು ಸಮರ್ಥಿಕೊಳ್ಳಲು ಸಾಧ್ಯ ಎಂದು ನಿತೀಶ್ ಪ್ರಶ್ನಿಸಿದ್ದಾರೆ.

ಲಾಲೂ ವಿರುದ್ಧ ಸಿಬಿಐ ಕೇಸ್, ಒಡಕಿನತ್ತ ನಿತೀಶ್, ಲಾಲೂ ಮೈತ್ರಿ?

2015 ನವೆಂಬರ್ ನಲ್ಲಿ ಬಿಹಾರ ಮುಖ್ಯಮಂತ್ರಿಯಾದ ನಿತೀಶ್ ಕುಮಾರ್, ಕೇವಲ 2 ವರ್ಷಗಳು ತುಂಬುವ ಮೊದಲೇ ರಾಜೀನಾಮೆ ನೀಡಿದ್ದಾರೆ. ಇದೀಗ ನಿತೀಶ್ ಕುಮಾರ್ ಮುಂದಿನ ನಡೆ ಕುತೂಹಲ ಮೂಡಿಸಿದೆ.

Loading...
loading...
error: Content is protected !!