ಬಿಹಾರದಲ್ಲಿನ್ನು ಜೆಡಿಯು ಬಿಜೆಪಿ ಮೈತ್ರಿ ಸರ್ಕಾರ |News Mirchi

ಬಿಹಾರದಲ್ಲಿನ್ನು ಜೆಡಿಯು ಬಿಜೆಪಿ ಮೈತ್ರಿ ಸರ್ಕಾರ

ಬಿಹಾರ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ಮಿತ್ರಪಕ್ಷ ಆರ್.ಜೆ.ಡಿ ಗೆ ಶಾಕ್ ನೀಡಿದ್ದ ನಿತೀಶ್ ಕುಮಾರ್ 24 ಗಂಟೆಯೊಳಗೆ ಮತ್ತೆ ಬಿಜೆಪಿ ಬೆಂಬಲದೊಂದಿಗೆ ಸೇರಿ ಸರ್ಕಾರ ರಚನೆಗೆ ಮುಂದಾಗಿದ್ದಾರೆ. ಇಂದು ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೆ, ಬಿಜೆಪಿಯ ಸುಶೀಲ್ ಕುಮಾರ್ ಮೋದಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ

2014 ರ ಲೋಕಸಭೆ ಚುನಾವಣೆವರೆಗೂ ಬಿಜೆಪಿಯೊಂದಿಗಿದ್ದ ನಿತೀಶ್, ಬಿಜೆಪಿಯಲ್ಲಿ ಮೋದಿಯವರ ವರ್ಚಸ್ಸು ಬೆಳೆಯುತ್ತಿರುವುದು ಸಹಿಸಲಾರದೆ ಬಿಜೆಪಿಯನ್ನು ವಿರೋಧಿಸಲು ಆರಂಭಿಸಿ ಮೈತ್ರಿ ಕಡಿದುಕೊಂಡಿದ್ದರು. ಮೋದಿ ಪ್ರಧಾನ ಮಂತ್ರಿಯಾದ ನಂತರ ಬಿಹಾರದಲ್ಲಿ ಮೋದಿ ಅಲೆಯನ್ನು ತಡೆಯಲು ಕಾಂಗ್ರೆಸ್ ಮತ್ತು ಜೆಡಿಯು ಜತೆ ಸೇರಿ ಮಹಾಮೈತ್ರಿಕೂಟ ರಚಿಸಿಕೊಂಡು ಮೈತ್ರಿಕೂಟ ಸರ್ಕಾರ ರಚಿಸಿದರು.

ಲಾಲೂ ಪುತ್ರನ ರಾಜೀನಾಮೆಗೆ 4 ದಿನಗಳ ಗಡುವು ನೀಡಿದ ನಿತೀಶ್

ಆದರೆ ಕಳೆದ ಕೆಲವು ದಿನಗಳಿಂದ ಲಾಲೂ ಪ್ರಸಾದ್ ಯಾದವ್ ಮತ್ತು ಅವರ ಪುತ್ರ ಹಾಗೂ ಉಪಮುಖ್ಯಮಂತ್ರಿಯಾಗಿದ್ದ ತೇಜಸ್ವಿಯಾದವ್ ಅವರ ಮೇಲೆ ಭ್ರಷ್ಟಾಚಾರ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲಲ್ಲಿ ತೇಜಸ್ವಿಯಾದವ್ ರಾಜೀನಾಮೆಗೆ ನಿತೀಶ್ ಒತ್ತಾಯಿಸಿದ್ದರು. ಆದರೆ ತೇಜಸ್ವಿ ಯಾದವ್ ರಾಜೀನಾಮೆ ನೀಡುವ ವಿಷಯದಲ್ಲಿ ಲಾಲೂ ಸೂಕ್ತವಾಗಿ ಸ್ಪಂದಿಸಿರಲಿಲ್ಲ. ಇವೆಲ್ಲದರ ಕಾರಣದಿಂದ ಜೆಡಿಯು ನೊಂದಿಗೆ ಮೈತ್ರಿ ಕಡಿದುಕೊಂಡ ನಿತೀಶ್, ನಿನ್ನೆಯಷ್ಟೇ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ, ಇಂದು ಮತ್ತೆ ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗುತ್ತಿದ್ದಾರೆ. ಮೂರು ವರ್ಷಗಳ ನಂತರ ಮತ್ತೆ ಕಮಲದೊಂದಿಗೆ ಸ್ನೇಹ ಮುಂದುವರೆಸಿದ್ದಾರೆ.

Loading...
loading...
error: Content is protected !!