ಕಾಂಗ್ರೆಸ್ ಗೆ ಮತ್ತೊಂದು ಶಾಕ್ ನೀಡಲು ಸಿದ್ದರಾದರೇ ನಿತೀಶ್? |News Mirchi

ಕಾಂಗ್ರೆಸ್ ಗೆ ಮತ್ತೊಂದು ಶಾಕ್ ನೀಡಲು ಸಿದ್ದರಾದರೇ ನಿತೀಶ್?

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೀಡಿದ ಶಾಕ್ ನಿಂದ ಯುಪಿಎ ಮೈತ್ರಿಕೂಟ ಪಕ್ಷಗಳು ಇನ್ನೂ ಚೇತರಿಸಿಕೊಳ್ಳುವ ಮುನ್ನವೇ ಮತ್ತೊಂದು ಶಾಕ್ ನೀಡಲು ಮುಂದಾಗಲಿದ್ದಾರೆ ನಿತೀಶ್ ಎಂಬ ಮಾತುಗಳು ಕೇಳಿಬರುತ್ತಿವೆ.

ಕಾಂಗ್ರೆಸ್ ಗೆ ಸ್ವಲ್ಪ ಮಟ್ಟಿಗೆ ನೆಲೆಯಿರುವ ಬಿಹಾರದಲ್ಲಿ ಒಟ್ಟು 14 ಕೈ ಶಾಸಕರು ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಬರುತ್ತಿರುವುದು ಕಾಂಗ್ರೆಸ್ ಪಕ್ಷವನ್ನು ಆತಂಕಕ್ಕೆ ದೂಡಿದೆ.

[ಇದನ್ನೂ ಓದಿ: ಲೆಫ್ಟಿನೆಂಟ್ ಉಮರ್ ಫಯಾಜ್ ಹತ್ಯೆ ಮಾಡಿದ್ದ ಉಗ್ರನ ಕೊಂದ ಸೇನೆ]

ಆದರೆ ಸಕಾಲದಲ್ಲಿ ಕಾಂಗ್ರೆಸ್ ಹೈಕಮಾಂಡ್ ಎಚ್ಚೆತ್ತುಕೊಂಡು ಕೂಡಲೇ ಬಿಹಾರ ಶಾಸಕರೊಂದಿಗೆ ಸಭೆ ನಡೆಸಿದೆ. ಬಿಹಾರ ಕಾಂಗ್ರೆಸ್ ಮುಖ್ಯಸ್ಥ ಅಶೋಕ್ ಚೌದರಿ, ಸಿಎಲ್ಪಿ ನಾಯಕ ಸದಾನಂದ ಸಿಂಗ್ ಸೇರಿದಂತೆ ಬಿಹಾರದಲ್ಲಿ 27 ಶಾಸಕರು, ಆರು ವಿಧಾನಪರಿಷತ್ ಸದಸ್ಯರೊಂದಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಭೆ ನಡೆಸಿದರು. ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬೀ ಆಜಾದ್, ಅಹ್ಮದ್ ಪಟೇಲ್, ಸಿಪಿ ಜೋಷಿ ಮುಂತಾದವರೂ ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ಚರ್ಚೆಯ ನಂತರ ಮಾತನಾಡಿದ ಕಾಂಗ್ರೆಸ್ ನಾಯಕರು, ಬಿಹಾರ ಕಾಂಗ್ರೆಸ್ ಶಾಸಕರೆಲ್ಲಾ ಒಗ್ಗಟ್ಟಾಗಿದ್ದು, ಯಾರೂ ನಮ್ಮ ಒಗ್ಗಟ್ಟನ್ನು ಒಡೆಯಲಾರರು ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾತ್ರ ಕಾಂಗ್ರೆಸ್ ಪಕ್ಷವನ್ನು ಬಲಹೀನಗೊಳಿಸಲು ತೀವ್ರ ಕಸರತ್ತು ನಡೆಸಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

Loading...
loading...
error: Content is protected !!