ಆ ರಾಸಲೀಲೆ ಸಿಡಿಯಲ್ಲಿ ರಂಜಿತಾ ಜೊತೆಗಿರುವುದು ನಿತ್ಯಾನಂದನೇ

ವಿವಾದಿತ ಆಧ್ಯಾತ್ಮಿಕ ಗುರು ನಿತ್ಯಾನಂದನಿಗೆ ಸಂಬಂಧಿಸಿದ ರಾಸಲೀಲೆ ಸಿಡಿಯಲ್ಲಿರುವುದ ನಿತ್ಯಾನಂದನೇ ಎಂದು ದೆಹಲಿ ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ಹೇಳಿದೆ. ವೀಡಿಯೋದಲ್ಲಿರುವುದು ನಿತ್ಯಾನಂದ ಮತ್ತು ನಟಿ ರಂಜಿತ ಎಂದು ಫೋರೆನ್ಸಿಕ್ ಲ್ಯಾಬ್ ಸ್ಪಷ್ಟಪಡಿಸಿದೆ.

ರಂಜಿತಾ ಜೊತೆ ಸಿಡಿಯಲ್ಲಿರುವುದು ತಾನಲ್ಲ, ಅದು ಮಾರ್ಫಿಂಗ್ ಮಾಡಲಾದ ವೀಡಿಯೋ ಎಂದು ಇದುವರೆಗೂ ನಿತ್ಯಾನಂದ ವಾದಿಸುತ್ತಾ ಬಂದಿದ್ದ. ಇದೀಗ ದೆಹಲಿ ಫೊರೆನ್ಸಿಕ್ ಲ್ಯಾಬ್ ನೀಡಿರುವ ವರದಿ ಬುಧವಾರ ಬಹಿರಂಗಗೊಂಡಿದೆ.

2010 ರಲ್ಲಿ ಸ್ವಾಮಿ ನಿತ್ಯಾನಂದನ ರಾಸಲೀಲೆ ಸಿಡಿಯನ್ನು ಆತನ ಕಾರು ಚಾಲಕ ಲೀಕ್ ಮಾಡಿದ್ದರು. ಆ ದೃಶ್ಯಗಳ ಮಾಧ್ಯಮಗಳು ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದವು. ಆದರೆ ತನಗೆ ಮಸಿ ಬಳಿಯಲು ಈ ಸಂಚು ನಡೆಸಲಾಗಿದೆ ಎಂದು ನಿತ್ಯಾನಂದ ಆರೋಪಿಸಿದ್ದ.

ಈಗಾಗಲೇ ನಿತ್ಯಾನಂದನ ವಿರುದ್ಧ ಹಲವು ಕೇಸುಗಳು ದಾಖಲಾಗಿವೆ. ಅಷ್ಟೇ ಅಲ್ಲದೆ ನಿತ್ಯಾನಂದ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಆರತಿ ರಾವ್ ಎಂಬ ಶಿಕ್ಷೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹೀಗಾಗಿ 2010 ರಲ್ಲಿ ಆತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.

Get Latest updates on WhatsApp. Send ‘Add Me’ to 8550851559