ಆಕ್ಸಿಸ್ ಬ್ಯಾಂಕ್ ಲೈಸೆನ್ಸ್ ರದ್ದು ವದಂತಿ

ಹಳೆಯ ನೋಟು ರದ್ದಾದ ನಂತರ ಕಪ್ಪು ಹಣ ಅಕ್ರಮವಾಗಿ ಬಿಳಿಯಾಗಿಸಿಕೊಳ್ಳಲು ಭ್ರಷ್ಟರಿಗೆ ಆಕ್ಸಿಸ್ ಬ್ಯಾಂಕ್ ನ ಕೆಲ ಶಾಖೆಗಳಲ್ಲಿ ಸಹಕರಿಸಿದ ಆರೋಪಗಳು ಬರುತ್ತಿವೆ.

ಈ ಆರೋಪಗಳ ಹಿನ್ನೆಲೆಯಲ್ಲಿ ಬ್ಯಾಂಕ್ ನ ಲೈಸೆನ್ಸ್ ರದ್ದಾಗುತ್ತದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ವದಂತಿಗಳಿಗೆ ಇದೀಗ ತೆರೆ ಬಿದ್ದಿದೆ.

ಅಕ್ಸಿಸ್ ಬ್ಯಾಂಕ್ ನ ಪರವಾನಗಿಯನ್ನು ರದ್ದು ಮಾಡುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ.