ನಾಳೆ ಬ್ಯಾಂಕುಗಳಿಗೆ ರಜೆ ಇಲ್ಲ

ಬೆಂಗಳೂರು: ಕನಕ ಜಯಂತಿ ಹಿನ್ನೆಲೆಯಲ್ಲಿ ಗುರುವಾರ ರಜೆ ಘೋಷಿಸಿದ್ದ ರಾಜ್ಯ ಸರ್ಕಾರ, ಹಳೆ ನೋಟು ಬದಲಾವಣೆಗೆ ಅನುಕೂಲವಾಗುವಂತೆ ತನ್ನ ನಿರ್ಧಾರ ಬದಲಿಸಿದೆ ಬ್ಯಾಂಕುಗಳಿಗೆ ಘೋಷಿಸಿದ್ದ ರಜೆಯನ್ನು ರದ್ದುಗೊಳಿಸಿದೆ.

ಇದಕ್ಕೂ ಮುನ್ನ ಕನಕದಾಸ ಜಯಂತಿ ರಜೆಯಿರುವ ಹಿನ್ನೆಲೆಯಲ್ಲಿ ಗುರುವಾರ ಯಾವುದೇ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದರು.

ಇದೀಗ ರಜೆ ರದ್ದಾದ ಹಿನ್ನೆಲೆಯಲ್ಲಿ ಗುರುವಾರ ರಾಜ್ಯಾದ್ಯಂತ ಬ್ಯಾಂಕುಗಳ ಎಂದಿನಂತೆ ಕಾರ್ಯನಿರ್ವಹಿಸಲಿದ್ದು ಸಾರ್ವಜನಿಕರು ನೋಟು ಬದಲಾಯಿಸಿಕೊಳ್ಳಲು ಅನುಕೂಲವಾಗಲಿದೆ.