ಇನ್ನು ಮಮತಾ ಸರ್ಕಾರದೊಂದಿಗೆ ಚರ್ಚೆಯ ಮಾತೇ ಇಲ್ಲ

ಪಶ್ಚಿಮ ಬಂಗಾಳದಲ್ಲಿ ಗೂರ್ಖಾ ಲ್ಯಾಂಡ್ ಹೋರಾಟ ಮುಂದುವರೆದಿದೆ. ಒಂದು ತಿಂಗಳಿನಿಂದ ತಮ್ಮನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಮಮತಾ ಸರ್ಕಾರದೊಂದಿಗೆ ಚರ್ಚೆ ಇಲ್ಲವೆಂದು ಬಿಜೆಎಂ ಹೇಳಿದೆ. ಚರ್ಚೆಗಳಿಗೆ ಆಹ್ವಾನಿಸಿದರೆ ಕೇಂದ್ರ ಸರ್ಕಾರದೊಂದಿಗೇ ಮಾತನಾಡುತ್ತೇವೆ ಎಂದು ಬಿಜೆಎಂ ನಾಯಕರು ಸ್ಪಷ್ಟಪಡಿಸಿದ್ದಾರೆ.

ಮತ್ತೊಂದು ಕಡೆ ಡಾರ್ಜಿಲಿಂಗ್ ನಲ್ಲಿ ಉಂಟಾಗಿರುವ ಅಶಾಂತಿಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

6ಜಿಬಿ ರ್ಯಾಮ್, 24 ಮೆಗಾ ಪಿಕ್ಸೆಲ್ ನ ನೋಕಿಯಾ ಎಡ್ಜ್ 2017

ಸ್ವತಂತ್ರ ರಾಜ್ಯಕ್ಕಾಗಿ ಒತ್ತಾಯಿಸುತ್ತಿರುವ ಗೂರ್ಖಾಲ್ಯಾಂಡ್ ಚಳುವಳಿಗಾರರು ಇನ್ನು ಕೇಂದ್ರದೊಂದಿಗೇ ವಿಷಯ ಇತ್ಯರ್ಥಪಡಿಸಿಕೊಳ್ಳಲು ಸಿದ್ಧವಾಗಿದ್ದಾರೆ. ಇನ್ನು ಮುಂದೆ ರಾಜ್ಯ ಸರ್ಕಾರದೊಂದಿಗೆ ಯಾವುದೇ ಚರ್ಚೆಗಳು ಇರುವುದಿಲ್ಲ ಎಂದು ಬಿಜೆಎಂ ನಾಯಕರು ಸ್ಪಷ್ಟಪಡಿಸಿದ್ದಾರೆ. ಅತ್ತ ಪಶ್ಚಿಮ ಬಂಗಾಳದಲ್ಲಿನ ರಾಜಕೀಯ ಪಕ್ಷಗಳ ಮೇಲೆ ಬಿಜೆಎಂ ಅಸಮಾಧಾನ ವ್ಯಕ್ತಪಡಿಸಿದೆ. ಒಂದು ತಿಂಗಳಿಂದ ಹೋರಾಟ ನಡೆಸುತ್ತಿದ್ದರೂ ಒಂದು ರಾಜಕೀಯ ಪಕ್ಷವೂ ಕೂಡಾ ತಮ್ಮ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿಲ್ಲ, ಹೋರಾಗಾರರು ಸಾವನ್ನಪ್ಪುತ್ತಿದ್ದರೂ ಒಂದೇ ಒಂದು ರಾಜಕೀಯ ಪಕ್ಷ ಕೂಡಾ ಬೆಂಬಲಿಸಿಲ್ಲ ಎಂದು ಬಿಜೆಎಂ ಬೇಸರ ವ್ಯಕ್ತಪಡಿಸಿದೆ.

ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸುತ್ತಿರುವ ಪ್ರತಿಭಟನಾಕಾರರ ಮೇಲೆ ಪೊಲೀಸರು ಹಲವು ಬಾರಿ ಲಾಠಿ, ಬುಲ್ಲೆಟ್ ಪ್ರಯೋಗಿಸಿದ್ದಾರೆ. ನಿನ್ನೆಯೂ ಸೋನಾಡಾ ಪಟ್ಟಣದಲ್ಲಿ ತಾಷಿ ಭೂಟಿಯಾ ಎಂಬ ಹೋರಾಟಗಾರ ಸಾವನ್ನಪ್ಪಿದ್ದಾನೆ. ಆತನ ದೇಹದ ಮೇಲೆ ಬುಲ್ಲೆಟ್ ಗುರುತುಗಳಿವೆ ಎಂದು ಹೋರಾಟಗಾರರು ಹೇಳುತ್ತಿದ್ದಾರೆ. ಹೋರಾಟಗಾರನನ್ನು ಗುಂಡಿಟ್ಟು ಕೊಂದ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪೊಲೀಸ್ ಠಾಣೆ ಎದುರು ಪ್ರತಿಭಟನೆಯನ್ನೂ ನಡೆಸಿದರು.