ನೋಟು ರದ್ದತಿಯ ನಂತರ ನಕಲಿ ನೋಟು ಚಲಾವಣೆಯಲ್ಲಿ ಇಲ್ಲ – News Mirchi

ನೋಟು ರದ್ದತಿಯ ನಂತರ ನಕಲಿ ನೋಟು ಚಲಾವಣೆಯಲ್ಲಿ ಇಲ್ಲ

ನೋಟು ರದ್ದತಿಯ ನಂತರ ದೇಶದಲ್ಲಿ ನಕಲಿ ನೋಟಿನ ಚಲಾವಣೆಯಿಲ್ಲ ಎಂದು ನೋಟು ರದ್ದು ಮಾಡುವಂತೆ ಸಲಹೆ ನೀಡಿದವರಲ್ಲಿ ಒಬ್ಬರಾದ ಅರ್ಥಕ್ರಾಂತಿ ಸಂಸ್ಥಾಪಕ ಅನಿಲ್ ಬೊಕಿಲ್ ಹೇಳಿದ್ದಾರೆ. ಈಗ ವ್ಯವಹಾರ ಪಾರದರ್ಶಕವಾಗಿದೆ, ಎಲ್ಲದಕ್ಕೂ ಪ್ರಮುಖ ಅಂಶವೆಂದರೆ ನಕಲಿ ನೋಟು ಚಲಾವಣೆಗೆ ಬಿದ್ದ ಹೊಡೆತ ಎಂದು ಹೇಳಿದ್ದಾರೆ.

ಬ್ಯಾಂಕುಗಳಿಗೆ ಈಗ ಬಂದಿರುವ ಹಣವೆಲ್ಲಾ ಬಿಳಿ ಹಣವಾಗಿದ್ದು, ನೋಟು ರದ್ದು ಕ್ರಮದ ಫಲಿತಾಂಶ ಖಚಿತಪಡಿಸಲು ಸ್ವಲ್ಪ ಸಮಯ ಹಿಡಿಯುತ್ತದೆ ಎಂದು ಜೂನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಆಯೋಜಿಸಿದ್ದ ಚರ್ಚೆಯಲ್ಲಿ ಹೇಳಿದ್ದಾರೆ.

ನೋಟು ರದ್ದು ಮಾಡಲು ಪ್ರಮುಖ ಕಾರಣ, ಗರಿಷ್ಟ ಮುಖಬೆಲೆಯ ನೋಟುಗಳು ಉದ್ದೇಶಿತ ಕಾರ್ಯಗಳಿಗೆ ಬಳಕೆಯಾಗುತ್ತಿರಲಿಲ್ಲ, ಬದಲಿಗೆ ಸಂಗ್ರಹದ ಸರಕಾಗಿ ಬದಲಾಗಿತ್ತು. ನಗದು ವ್ಯವಹಾರಗಳು ಲೆಕ್ಕಕ್ಕೆ ಸಿಗುವುದಿಲ್ಲ, ಆದರೆ ಡಿಜಿಟಲ್ ವ್ಯವಹಾರಗಳು ಪಾರದರ್ಶಕವಾಗಿರುತ್ತದೆ ಎಂದರು. 50 ರೂಪಾಯಿಗಿಂತ ಹೆಚ್ಚಿನ ಮೌಲ್ಯದ ನೋಟುಗಳು ಇರಲೇ ಬಾರದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

Loading...

Leave a Reply

Your email address will not be published.