ದೆಹಲಿಯಲ್ಲಿ ಈ ದೀಪಾವಳಿಗೆ ಪಟಾಕಿ ಬಳಕೆಯಿಲ್ಲ – News Mirchi

ದೆಹಲಿಯಲ್ಲಿ ಈ ದೀಪಾವಳಿಗೆ ಪಟಾಕಿ ಬಳಕೆಯಿಲ್ಲ

ಈ ವರ್ಷವೂ ರಾಷ್ಟ್ರ ರಾಜದಾನಿ ದೆಹಲಿಯಲ್ಲಿ ಪಟಾಕಿ ಬಳಕೆ ಮತ್ತು ಮಾರಾಟ ಮಾಡುವಂತಿಲ್ಲ. ಪಟಾಕಿ ಮೇಲಿನ ನಿಷೇಧವನ್ನು ಸುಪ್ರೀಂ ಕೋರ್ಟ್ ಮುಂದುವರೆಸಿದೆ. ನವೆಂಬರ್ 1 ರವರೆಗೆ ರಾಜಧಾನಿಯಲ್ಲಿ ಪಟಾಕಿ ಬಳಕೆಯನ್ನು ನಿಷೇಧಿಸಿದೆ.

ಹಬ್ಬಗಳ ಸಂದರ್ಭಗಳಲ್ಲಿ ಮಾಲಿನ್ಯ ಮಟ್ಟ ಅಧಿಕವಾಗುತ್ತಿದೆ, ಹೀಗಾಗಿ ಪಟಾಕಿ ಬಳಕೆ ಮೇಲೆ ಪುನಃ ನಿಷೇಧ ವಿಧಿಸಬೇಕು ಎಂದು ಮೂವರು ಮಕ್ಕಳ ಹೆಸರಿನಲ್ಲಿ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯೂ ಬೆಂಬಲ ನೀಡಿತ್ತು.

ಸೆಪ್ಟೆಂಬರ್ ನಲ್ಲಷ್ಟೇ ಪಟಾಕಿ ಮಾರಾಟದ ಮೇಲಿನ ನಿಷೇಧವನ್ನು ಸುಪ್ರೀಂ ಕೋರ್ಟ್ ತಾತ್ಕಾಲಿಕವಾಗಿ ತೆರವುಗೊಳಿಸಿತ್ತು. ಆದರೆ ನಿಷೇಧ ತೆರವಿನ ಆದೇಶ ನವೆಂಬರ್ ನಿಂದ ಜಾರಿಗೆ ಬರಲಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಪಟಾಕಿ ನಿಷೇಧವು ಮಾಲಿನ್ಯ ನಿಯಂತ್ರಣದ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂಬುದು ತಿಳಿಯಬೇಕಿದೆ ಎಂದು ಹೇಳಿದೆ.

Get Latest updates on WhatsApp. Send ‘Add Me’ to 8550851559

Contact for any Electrical Works across Bengaluru

Loading...
error: Content is protected !!