ಗರ್ಭಿಣಿಯರು ಲೈಂಗಿಕ ಸಂಪರ್ಕ, ಮಾಂಸದಿಂದ ದೂರವಿರಿ ಎಂಬ ಸಲಹೆಗಳಿಗೆ ವಿರೋಧ |News Mirchi

ಗರ್ಭಿಣಿಯರು ಲೈಂಗಿಕ ಸಂಪರ್ಕ, ಮಾಂಸದಿಂದ ದೂರವಿರಿ ಎಂಬ ಸಲಹೆಗಳಿಗೆ ವಿರೋಧ

ಗರ್ಭಿಣಿ ಮಹಿಳೆಯರು ಮಾಂಸ ಸೇವಿಸಬೇಡಿ, ಲೈಂಗಿಕ ಸಂಪರ್ಕದಿಂದ ದೂರವಿರಿ, ಕೆಟ್ಟ ಚಟಗಳನ್ನು ಬಿಡಿ, ಆಲೋಚನೆಗಳು ಶುದ್ಧವಾಗಿರಲಿ, ಕೊಠಡಿಯಲ್ಲಿ ಆಹ್ಲಾದಕರವಾದ ಪೋಸ್ಟರ್ ಗಳನ್ನು ಅಂಟಿಸಿ ಎಂದು ಆಯುಷ್ ಸಚಿವಾಲಯ ಗರ್ಭಿಣಿಯರಿಗೆ ಸಲಹೆ ನೀಡುತ್ತಾ ಮದರ್ ಅಂಡ್ ಚೈಲ್ಡ್ ಕೇರ್ ಹೆಸರಿನಲ್ಲಿ ಪುಸ್ತಕವೊಂದನ್ನು ಹೊರತಂದಿದೆ. ಬಿಜೆಪಿ ನೇತೃತ್ವದ ಸರ್ಕಾರ ಹೊರತಂದಿರುವ ಈ ಪುಸ್ತಕದ ವಿರುದ್ಧ ವಿಚಾರವಾದಿಗಳಿಂದ ಟೀಕೆಗಳೂ ವ್ಯಕ್ತವಾಗುತ್ತಿವೆ.

ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಸೇರಿ ಈ ಅವೈಜ್ಞಾನಿಕ ನೀತಿಗಳನ್ನು ಜನರ ಮೇಲೆ ಹೇರಲು ಪ್ರಯತ್ನಿಸುತ್ತಿದ್ದಾರೆ ಎಂದು ಬುದ್ದಿಜೀವಿಗಳು ಟೀಕೆ ಮಾಡುತ್ತಿದ್ದಾರೆ.

ಗರ್ಭಿಣಿಯರಿಗೆ ಮಾಂಸ ಸೇವನೆ ಮಾಡಬೇಡಿ ಎನ್ನುವುದು ಸರಿಯಲ್ಲ, ಗರ್ಭಿಣಿ ಮಹಿಳೆಯರು ಮಾಂಸ ಸೇವಿಸುವುದರಿಂದ ದೇಹಕ್ಕೆ ಬೇಕಾದ ಐರನ್, ಪ್ರೊಟೀನ್ ಲಭ್ಯವಾಗುತ್ತದೆ. ಸಸ್ಯಾಹಾರದಿಂದ ಲಭಿಸುವ ಕಬ್ಬಿಣಾಂಶ, ಪ್ರೊಟೀನ್ ಮಾಂಸಾಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಅಷ್ಟೇ ಅಲ್ಲದೆ ಯಾವುದೇ ಸಮಸ್ಯೆಗಳಿಲ್ಲದ ಆರೋಗ್ಯವಂತ ಗರ್ಭಿಣಿ ಮಹಿಳೆಯರು ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು ಎಂದು ಅಪೊಲೊ ಹೆಲ್ ಕೇರ್ ಗ್ರೂಪ್ ನ  ಮಾಳವಿಕಾ ಸಬರ್ವಾಲ್ ಹೇಳಿದ್ದಾರೆ.

Loading...
loading...
error: Content is protected !!