ಗಾಂಧಿ ಹತ್ಯೆ ಪ್ರಕರಣದ ಮರುತನಿಖೆ ಅಗತ್ಯವಿಲ್ಲ, ಸುಪ್ರೀಂಗೆ ವರದಿ |News Mirchi

ಗಾಂಧಿ ಹತ್ಯೆ ಪ್ರಕರಣದ ಮರುತನಿಖೆ ಅಗತ್ಯವಿಲ್ಲ, ಸುಪ್ರೀಂಗೆ ವರದಿ

ಮಹಾತ್ಮ ಗಾಂಧಿಯವರ ಹತ್ಯೆಗೆ ಸಂಬಂಧಿಸಿದಂತೆ ಮತ್ತೆ ತನಿಖೆ ನಡೆಸುವ ಅಗತ್ಯವಿಲ್ಲ ಎಂದು ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ವಕೀಲರು ಹೇಳಿದ್ದಾರೆ. ಗಾಂಧಿಯವರ ಹತ್ಯೆಗೆ ಸಂಬಂಧಿಸಿದ ದಾಖಲೆಗಳನ್ನೆ ಪರಿಶೀಲಿಸಲು ಸುಪ್ರೀಂ ಕೋರ್ಟ್ ಹಿರಿಯ ವಕೀಲ ಹಾಗೂ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮರೇಂದ್ರ ಶರಣ್ ಅವರು ಸುಪ್ರೀಂ ಕೋರ್ಟ್ ಗೆ ವರದಿ ನೀಡಿದ್ದಾರೆ.

ಗಾಂಧಿಯವರ ಹತ್ಯೆ ಮಾಡಿದ ವ್ಯಕ್ತಿ, ಹತ್ಯೆಗೆ ಬಳಸಿದ ಬುಲೆಟ್ ಗಳನ್ನು ಗುರುತಿಸಲಾಗಿದ್ದು ಹೆಚ್ಚಿನ ತನಿಖೆಯ ಅಗತ್ಯವಿಲ್ಲ ಎಂದು ಅವರು ವರದಿಯಲ್ಲಿ ಹೇಳಿದ್ದಾರೆ.

ಮಹಾತ್ಮ ಗಾಂಧಿ ಎರಡನೇ ವ್ಯಕ್ತಿ ಹಾರಿಸಿದ ನಾಲ್ಕನೇ ಗುಂಡಿಗೆ ಬಲಿಯಾಗಿದ್ದರು ಎಂದು ಕಳೆದ ವರ್ಷ ವ್ಯಕ್ತಿಯೊಬ್ಬರು ಪಿಟೀಷನ್ ದಾಖಲಿಸಿದ್ದರು. ಜನವರಿ 30, 1948 ರಂದು ನಾತೂರಾಮ್ ಗೋಡ್ಸೆ ಅವರಿಂದ ಗಾಂಧಿಯಿಂದ ಹತ್ಯೆಯಾಗಿದ್ದು, ಗೋಡ್ಸೆ ಜೊತೆಗೆ ಇನ್ನಿಬ್ಬರನ್ನು ನೇಣಿಗೇರಿಸಲಾಗಿತ್ತು.

7 ದಶಕಗಳ ಹಳೆಯ ಪ್ರಕರಣದ ತನಿಖೆಯನ್ನು ಸಾಧಿಸುವಂತದ್ದೇನೂ ಇಲ್ಲ ಎಂದು ನ್ಯಾಯಾಲಯ ಹೇಳಿತ್ತು. ಆದಾಗ್ಯೂ ಅರ್ಜಿದಾರನ ಆರೋಪ ಕುರಿತು ಪರಿಶೀಲಿಸಿ ಸಹಕರಿಸುವಂತೆ ನ್ಯಾಯಾಲಯ ಕೇಳಿತ್ತು. ಗಾಂಧೀಜಿಯ ನಿಜವಾದ ಕೊಲೆಗಾರ ಇನ್ನೂ ಸಿಕ್ಕಿಲ್ಲ ಎಂದು ಸಾಬೀತುಪಡಿಸುವ ದಾಖಲೆಗಳನ್ನು ಹೊಂದಿರುವುದಾಗಿ ಅಭಿನವ ಭಾರತ ಸಂಸ್ಥಾಪಕ ಅರ್ಜಿದಾರ ಪಂಕಜ್ ಫಾದ್ನಿಸ್ ಹೇಳಿದ್ದರು. ಬಾಂಬೆ ಹೈಕೋರ್ಟಿನಲ್ಲಿ ಪಂಕಜ್ ಪಿಟೀಷನ್ ತಿರಸ್ಕಾರವಾದ ನಂತರ ಸುಪ್ರೀಂ ಮೆಟ್ಟಿಲೇರಿದ್ದರು.

English Sumamry: Supreme Court appointed Lawyer to examine the documents related to the assassination of Mahatma Gandhi, has told the court today that no need to re-investigate the case.

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!