ನನ್ನ ತೇಜೋವಧೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ: ವರ್ಣಿಕಾ ಕುಂದು – News Mirchi

ನನ್ನ ತೇಜೋವಧೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ: ವರ್ಣಿಕಾ ಕುಂದು

ತನ್ನ ಮೇಲೆ ನಡೆಯುತ್ತಿರುವ ರಾಜಕೀಯ ನಿಂದನೆಗಳಿಗೆ ವರ್ಣಿಕಾ ಕುಂದು ಮತ್ತೊಮ್ಮೆ ತಕ್ಕ ಉತ್ತರ ನೀಡಿದ್ದಾರೆ. ತನ್ನ ನಡತೆಯ ಕುರಿತು ಬೆರಳೆತ್ತಿ ತೋರಿಸುವ ಅರ್ಹತೆ ಯಾರಿಗೂ ಇಲ್ಲ ಎಂದು ಆಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಯಾವಾಗ ಎಲ್ಲಿ ಹೋಗಿದ್ದೆ ಎಂಬುದು ಎಲ್ಲರಿಗೂ ಸಂಬಂಧಿಸಿದ್ದಲ್ಲ. ಈ ವಿಷಯದ ಆಧಾರದ ಮೇಲೆ ಒಬ್ಬ ಮಹಿಳೆಯ ನಡತೆಯ ಬಗ್ಗೆ ತೀರ್ಮಾನಿಸಲು ಆಗುವುದಿಲ್ಲ. ಇಂತಹ ಕೆಲಸ ಒಬ್ಬ ಯುವಕ ಮಾಡಿದ್ದರೆ ಆತನನ್ನು ಯಾರೂ ಪ್ರಶ್ನಿಸುವುದಿಲ್ಲ. ಯುವಕರು ಮಾಡುವ ಕೆಲಸಗಳನ್ನು ಯುವತಿಯರು ಮಾಡುವಾಗ ಮಾತ್ರ ಆಕೆಯ ತೇಜೋವಧೆ ಮಾಡುತ್ತಾರೆ. ಇಂತಹ ಮನಸ್ಥಿತಿಯಿರುವ ವ್ಯಕ್ತಿಗಳನ್ನು ಬಹಿರಂಗವಾಗಿ ಮಹಿಳೆಯರು ವಿರೋಧಿಸಬೇಕು ಎಂದು ಆಕೆ ಹೇಳಿದ್ದಾರೆ.

ಪಕ್ಷ ಬಿಡುವವರು ಕಾರಣ ನೀಡದೆ ಬಿಡಲಿ: ಅಖಿಲೇಶ್ ಯಾದವ್

ಮತ್ತೊಂದು ಕಡೆ ಸಾಮಾಜಿಕ ತಾಣಗಳಲ್ಲಿ ಆಕೆಯ ತೇಜೋವಧೆ ಮಾಡುತ್ತಾ ಬರುತ್ತಿರುವ ವೀಡಿಯೋಗಳು, ಫೋಟೋಗಳಿಗೆ ಪ್ರತಿಕ್ರಿಯಿಸಿರುವ ವರ್ಣಿಕಾ, ಇಂತಹ ಅಪಪ್ರಚಾರಗಳಿಗೆ ತಾನು ಹೆದರುತ್ತೇನೆ ಎಂದುಕೊಳ್ಳಬೇಡಿ, ತನ್ನ ನಡತೆ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಿದಂತಾಗುತ್ತದೆ ಎಂದುಕೊಂಡರೆ ಅದು ತಪ್ಪಾಗುತ್ತದೆ. ಒಂದು ವೇಳೆ ಯಾರಾದರೂ ಹಾಗೆ ಬರೆದರೆ ಅದು ಅವರ ನಡತೆಯನ್ನೇ ಪ್ರದರ್ಶಿಸಿದಂತಾಗುತ್ತದೆಯೇ ಹೊರತು ತನ್ನದಲ್ಲ ಎಂದು ಹೇಳಿದರು.

{ಕನ್ನಡವೇ ಸತ್ಯ ಫೇಸ್ಬುಕ್ ಗ್ರೂಪ್ ಸೇರಲು ಕ್ಲಿಕ್ ಮಾಡಿ}

ರಾತ್ರಿ ಕಾರಿನಲ್ಲಿ ಹೋಗುತ್ತಿದ್ದ ವರ್ಣಿಕಾ ಕುಂದು ಅವರನ್ನು ಹರಿಯಾಣ ಬಿಜೆಪಿ ಮುಖಂಡ ಸುಭಾಷ್ ಬರಾಲಾ ಪುತ್ರ ವಿಕಾಸ್ ಬರಾಲಾ ಮತ್ತು ಆತನ ಸ್ನೇಹಿತ ಕಾರಿನಲ್ಲಿ ಬೆನ್ನಟ್ಟಿ ಬೆದರಿಸಿದ ವಿಷಯ ತಿಳಿದದ್ದೇ. ಅವರು ವರ್ಣಿಕಾ ಕಾರನ್ನು ಬೆನ್ನಟ್ಟಿರುವುದು ಐದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಆದರೆ ಮಧ್ಯರಾತ್ರಿ ಆಕೆಗೆ ಅಲ್ಲಿ ಏನು ಕೆಲಸ, ಒಂಟಿಯಾಗಿ ಹೊರಗೇಕೆ ಹೋಗಿದ್ದಳೆಂದು ಕೆಲ ಬಿಜೆಪಿ ನಾಯಕರು ಪ್ರಶ್ನಿಸಿದ್ದರ ಜೊತೆ ಸಾಮಾಜಿಕ ತಾಣಗಳಲ್ಲಿ ಕೂಡಾ ಆಕೆಯ ವಿರುದ್ಧ ಪ್ರಚಾರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆಕೆ ಮತ್ತೊಮ್ಮೆ ಪ್ರತಿಕ್ರಿಯಿಸಿದ್ದಾರೆ.

Loading...