ಮುಂದಿನ ಚುನಾವಣೆಯಲ್ಲಿ ಮೋದಿಗೆ ಸವಾಲೆಸೆಯಬಲ್ಲವರು ಯಾರೂ ಇಲ್ಲ: ನಿತೀಶ್ ಕುಮಾರ್ – News Mirchi

ಮುಂದಿನ ಚುನಾವಣೆಯಲ್ಲಿ ಮೋದಿಗೆ ಸವಾಲೆಸೆಯಬಲ್ಲವರು ಯಾರೂ ಇಲ್ಲ: ನಿತೀಶ್ ಕುಮಾರ್

2019 ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸವಾಲೆಸೆಯಬಲ್ಲ ಸಮರ್ಥ ವ್ಯಕ್ತಿ ಅಥವಾ ಪಕ್ಷ ಇಲ್ಲ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ನೇತೃತ್ವದ ಆರ್.ಜೆ.ಡಿ ಗೆ ಕೈಕೊಟ್ಟು ಮತ್ತೆ ಬಿಜೆಪಿಯೊಂದಿಗೆ ಕೈಜೋಡಿಸಿದ ನಂತರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೊಟ್ಟ ಮೊದಲ ಪತ್ರಿಕಾಗೋಷ್ಟಿ ನಡೆಸಿದರು. ಈ ವೇಳೆ ಸದ್ಯದ ರಾಜಕೀಯ ಸನ್ನಿವೇಶದಲ್ಲಿ ನರೇಂದ್ರ ಮೋದಿಯವರೊಂದಿಗೆ ಸೆಣಸಬಲ್ಲವರು ಯಾರೂ ಇಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ರಿಟನ್ ನಲ್ಲಿ ಹೆಚ್ಚುತ್ತಿರುವ ಪುರುಷರ ಮೇಲಿನ ರೇಪ್’ಗಳು!

ಲಾಲೂ ಪ್ರಸಾದ್ ಯಾದವ್ ಮತ್ತ ಅವರ ಪತ್ನಿ ರಾಬ್ರೀದೇವಿ ಅವರ ವಿರುದ್ಧ ಸಿಬಿಐ ದಾಖಲಿಸಿರುವ ಪ್ರಕರಣಗಳ ಕುರಿತು ಪ್ರತಿಕ್ರಿಯಿಸಿದ ನಿತೀಶ್ ಕುಮಾರ್, ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ವಿವರಣೆ ನೀಡಲು ಹಲವು ಅವಕಾಶಗಳನ್ನು ಲಾಲೂ ಪ್ರಸಾದ್ ಯಾದವ್ ಅವರಿಗೆ ನೀಡಿದ್ದೆ ಅದರೆ ಅವರಿಂದ ಯಾವುದೇ ಪ್ರತಿಕ್ರಿಯೆಯಿಲ್ಲ. ಒಂದು ವೇಳೆ ಸೂಕ್ತ ವಿವರಣೆ ನೀಡಿದ್ದೇ ಆಗಿದ್ದಲ್ಲಿ ಪರಿಸ್ಥಿತಿಗಳು ಬೇರೆ ರೀತಿಯಾಗಿರುತ್ತಿದ್ದವು ಎಂದು ಹೇಳಿದರು.

ಬಿಜೆಪಿಯ ಹೊಸ ತಂತ್ರ: ರಕ್ಷಣಾ ಸಚಿವರಾಗಿ ಅಮಿತ್ ಶಾ?

ಮತ್ತೊಂದು ಕಡೆ ನಿತೀಶ್ ನೀಡಿದ ಶಾಕ್ ನಿಂದ ನಿಧಾನವಾಗಿ ಹೊರಬರತ್ತಿರುವ ಲಾಲೂ ಪ್ರಸಾದ್, ಜೆಡಿಯು ಸಹಸ್ಥಾಪಕ ಶರದ್ ಯಾದವ್ ಅವರನ್ನು ಬಿಜೆಪಿ ವಿರುದ್ಧದ ಹೋರಾಟವನ್ನು ಮುನ್ನಡೆಸುವಂತೆ ಮನವಿ ಮಾಡಿದ್ದಾರೆ.

Contact for any Electrical Works across Bengaluru

Loading...
error: Content is protected !!