10 ಲಕ್ಷ ಮುಂಗಡ ಬುಕಿಂಗ್ ಕಂಡ ಸ್ಮಾರ್ಟ್ ಫೋನ್ ಇದು – News Mirchi

10 ಲಕ್ಷ ಮುಂಗಡ ಬುಕಿಂಗ್ ಕಂಡ ಸ್ಮಾರ್ಟ್ ಫೋನ್ ಇದು

ಮೊಬೈಲ್ ಮಾರುಕಟ್ಟೆಯಲ್ಲಿ ಮತ್ತೆ ಸಂಚಲನ ಸೃಷ್ಟಿಸಲು ಬಂದಿರುವ ನೋಕಿಯಾ, ಈಗಾಗಲೇ ಕೆಲ ಸ್ಮಾರ್ಟ್ ಫೋನ್ ಗಳ ಜೊತೆ ಫೀಚರ್ ಫೋನ್ ಗಳನ್ನೂ ಕೂಡಾ ಬಿಡುಗಡೆ ಮಾಡಿದೆ. ಒಂದು ಕಾಲದಲ್ಲಿ ಮೊಬೈಲ್ ಮಾರುಕಟ್ಟೆಯನ್ನು ಆಳಿದ ನೋಕಿಯಾ, ಈಗ ಮತ್ತೆ ಅಷ್ಟೇ ಸದ್ದು ಮಾಡುತ್ತಿದೆ. ಮುಖ್ಯವಾಗಿ “ನೋಕಿಯಾ 6” ಈಗಾಗಲೇ 10 ಲಕ್ಷಕ್ಕೂ ಹೆಚ್ಚೂ ರಿಜಿಸ್ಟ್ರೇಷನ್ ಗಳನ್ನು ಪಡೆದಿದೆ. ಅಮೆಜಾನ್ ನಲ್ಲಿ ನೋಕಿಯಾ 6 ಒಂದು ಮಿಲಿಯನ್ ಗೂ ಹೆಚ್ಚು ಮುಂಗಡ ಬುಕಿಂಗ್ ಆಗಿದೆ ಎಂದು ಅಮೆಜಾನ್ ಪ್ರಕಟಿಸಿದೆ.

ನೋಕಿಯಾ 6 ರ ಜೊತೆ ನೋಕಿಯಾ 5, 3 ಸ್ಮಾರ್ಟ್ ಫೋನ್ ಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. “ನೋಕಿಯಾ-6” ಸ್ಮಾರ್ಟ್ ಫೋನ್ ಗಾಗಿ ಜುಲೈ 14 ರಂದು ಮುಂಗಡ ಬುಕಿಂಗ್ ಆರಂಭವಾಗಿದ್ದು, ಆಗಸ್ಟ್ 23 ರಿಂದ ರೂ.14,999 ಕ್ಕೆ ಖರೀದಿಗೆ ಲಭ್ಯವಿರುತ್ತದೆ. ಹಾಗೆಯೇ ಅಮೆಜಾನ್ ಮೂಲಕ ಖರೀದಿ ಮಾಡಿದ ಅಮೆಜಾನ್ “ಪ್ರೈಮ್” ಸದಸ್ಯರಿಗೆ ರೂ.1000 ಕ್ಯಾಷ್ ಬ್ಯಾಕ್ ಆಫರ್ ಕೂಡಾ ಇದೆ. ಅಷ್ಟೇ ಅಲ್ಲದೆ ಡೈಲೀ ಡೀಲ್ಸ್ ವಿಡ್ಜೆಟ್ ನಲ್ಲಿ ಅಮೆಜಾನ್ ಶಾಪಿಂಗ್ ಆಪ್, ಪ್ರೈಮ್ ವೀಡಿಯೋ ಆಪ್ ಗಳನ್ನು ಮೊದಲೇ ಇನ್ಸ್ಟಾಲ್ ಮಾಡಲಾಗಿದೆ. ಇದರಿಂದಾಗಿ ಸಾವಿರಾರು ಸಿನಿಮಾಗಳೂ, ಟಿವಿ ಕಾರ್ಯಕ್ರಮಗಳನ್ನು ಕೂಡಾ ಗ್ರಾಹಕರು ಪಡೆಯಬಹುದು.

“ನೋಕಿಯಾ 6” ಫೀಚರ್ಸ್
5.5 ಇಂಚಿನ ಫೂಲ್ ಹೆಚ್.ಡಿ 2.5ಡಿ ಕರ್ವ್ಡ್ ಗ್ಲಾಸ್ ಡಿಸ್ ಪ್ಲೇ
ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್, ಆಂಡ್ರಾಯ್ಡ್ 7.1 ನೌಗಟ್
ಆಕ್ಟಾಕೋರ್ ಪ್ರೊಸೆಸರ್
3 ಜಿಬಿ ರ್ಯಾಮ್, 32 ಜಿಬಿ ಸ್ಟೋರೇಜ್, 128 ಜಿಬಿ ವಿಸ್ತರಿಸಬಲ್ಲ ಸ್ಟೋರೇಜ್
16 ಮೆಗಾ ಪಿಕ್ಸೆಲ್ ಹಿಂಬದಿ ಕ್ಯಾಮೆರಾ
8 ಮೆಗಾ ಪಿಕ್ಸೆಲ್ ಸೆಲ್ಫೀ ಕ್ಯಾಮೆರಾ
ಫಿಂಗರ್ ಪ್ರಿಂಟ್ ಸೆನ್ಸಾರ್
4ಜಿ ವಿವೋ ಎಲ್.ಟಿ.ಇ
3000 ಎಂ.ಎ.ಹೆಚ್ ಬ್ಯಾಟರಿ ಸಾಮರ್ಥ್ಯ

Loading...