ಮೊದಲ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ ಫೋನ್ |News Mirchi

ಮೊದಲ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ ಫೋನ್

ಆಂಡ್ರಾಯ್ಡ್ ಒಎಸ್ ನೊಂದಿಗೆ ಮೊಟ್ಟ ಮೊದಲ ನೋಕಿಯಾ ಸ್ಮಾರ್ಟ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಫಿನ್ ಲ್ಯಾಂಡ್ ನ ನೋಕಿಯಾ ಮೊಬೈಲ್ ತಯಾರಿಕಾ ಕಂಪನಿ ಹೆಚ್.ಎಂ.ಡಿ ಗ್ಲೋಬಲ್ ಈ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ. “ನೋಕಿಯಾ 6” ಹೆಸರಿನ ಈ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ನೊಂದಿಗೆ ಕೆಲಸ ಮಾಡುತ್ತದೆ. ಅಂದರೆ ಆಂಡ್ರಾಯ್ಡ್ ಒಎಸ್ ನೊಂದಿಗೆ ಬರುತ್ತಿರುವ ಮೊದಲ ನೋಕಿಯಾ ಸ್ಮಾರ್ಟ್ ಫೋನ್ ಇದೇ.

ಸದ್ಯಕ್ಕೆ ಈ ಫೋನ್ ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿದೆ. ಮುಂದೆ ಭಾರತದಲ್ಲೂ ಬಿಡುಗಡೆಯಾಗಲಿದೆ. 5.5 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಇರುವ ಈ “ನೋಕಿಯಾ 6” ಬೆಲೆ ಚೀನಾದಲ್ಲಿ 1,699 ಯುವಾನ್(ರೂ.16,768).

“ನೋಕಿಯಾ 6” ಸ್ಮಾರ್ಟ್ ಫೋನ್ ಇತರೆ ಫೀಚರ್ ಗಳು

  • ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ ನೋಗಟ್ 7.0
  • 5.5 ಇಂಚಿನ ಡಿಸ್‌ ಪ್ಲೇ
  • ಕ್ವಾಲ್ ಕಾಮ್ ಸ್ನಾಪ್ ಡ್ರಾಗನ್ 430 ಪ್ರೊಸೆಸರ್
  • 4ಜಿಬಿ ರ‌್ಯಾಮ್
  • 64 ಇಂಟರ್ನಲ್ ಮೆಮೊರಿ, ಮೈಕ್ರೋ ಎಸ್‌ಡಿ ಕಾರ್ಡ್ ಸಪೋರ್ಟ್
  • ಹಿಂಬದಿ ಕ್ಯಾಮೆರಾ : 16 ಮೆಗಾ ಪಿಕ್ಸೆಲ್
  • ಫ್ರಂಟ್ ಕ್ಯಾಮೆರಾ: 8 ಮೆಗಾ ಪಿಕ್ಸೆಲ್
  • ಬ್ಯಾಟರಿ: 3000 ಎಂಎಹೆಚ್

2014 ರಲ್ಲಿ ನೋಕಿಯಾ ತನ್ನ ಮೊಬೈಲ್ ತಯಾರಿಕಾ ಘಟಕಗಳನ್ನು ಮೈಕ್ರೋಸಾಫ್ಟ್ ಗೆ ಮಾರಿತ್ತು. ಆದರೆ “ನೋಕಿಯಾ” ಬ್ರ್ಯಾಂಡ್ ನೇಮ್ ಮೇಲಿನ ಹಕ್ಕುಗಳನ್ನು ಮಾತ್ರ ತನ್ನ ಬಳಿಯೇ ಉಳಿಸಿಕೊಂಡಿತ್ತು.

ಇತ್ತೀಚೆಗಷ್ಟೇ ನೋಕಿಯಾ ಹೆಸರಿನೊಂದಿಗೆ ಫಿನ್‌ಲ್ಯಾಂಡ್ ನ ಹೆಚ್.ಎಂ.ಡಿ ಗ್ಲೋಬಲ್ ಸಂಸ್ಥೆ ಹಕ್ಕುಗಳನ್ನು ಪಡೆಯಿತು

Loading...
loading...
error: Content is protected !!