6ಜಿಬಿ ರ್ಯಾಮ್, 24 ಮೆಗಾ ಪಿಕ್ಸೆಲ್ ನ ನೋಕಿಯಾ ಎಡ್ಜ್ 2017

ನೋಕಿಯಾ 8 ಮತ್ತು ನೋಕಿಯಾ 9 ನಂತರ ನೋಕಿಯಾದಿಂದ ಬಿಡುಗಡೆಯಾಗುತ್ತಿರುವ ಬಹು ನಿರೀಕ್ಷಿತ ಸ್ಮಾರ್ಟ್ ಫೋನ್ ನೋಕಿಯಾ ಎಡ್ಜ್. ಬಹುತೇಕ ಡಿಸ್ಪ್ಲೇಯಿಂದ ಆವೃತವಾಗಿರುವ ಎಡ್ಜ್ ಟು ಎಡ್ಜ್ ಫೋನ್ ಇದಾಗಿರುವುದು ವಿಶೇಷ. ನೋಕಿಯಾ ಎಡ್ಜ್ ಸ್ನ್ಯಾಪ್ ಡ್ರಾಗನ್ 835 ಚಿಪ್ಸೆಟ್ ನಿಂದ ಕೆಲಸ ಮಾಡಲಿದ್ದು, 6ಜಿಬಿ ರ್ಯಾಮ್ ಹೊಂದಿದೆ. ನೋಕಿಯಾ ಎಡ್ಜ್ 2017 5.7 ಇಂಚಿನ ಅಮೋಲ್ಡ್ 2ಕೆ ರೆಸಲ್ಯೂಷನ್ ಡಿಸ್ಪ್ಲೇ ಹೊಂದಿದ್ದು, ಗೋರಿಲ್ಲಾ ಗ್ಲಾಸ್ 5 ರಿಂದ ರಕ್ಷಣೆ ಹೊಂದಿದೆ.

ನೋಕಿಯಾ ಎಡ್ಜ್ ನಲ್ಲಿ ನಮಗಿಷ್ಟವಾಗುವ ಅಂಶಗಳಲ್ಲಿ ಅದರ ಕ್ಯಾಮೆರಾ ಕೂಡಾ ಒಂದು. 4ಕೆ ವೀಡಿಯೋಗಳನ್ನು 24ಮೆಗಾ ಪಿಕ್ಸೆಲ್ ಹಿಂಬದಿ ಕ್ಯಾಮೆರಾ ಮತ್ತು 12 ಮೆಗಾ ಪಿಕ್ಸೆಲ್ ನ ಫ್ರಂಟ್ ಕ್ಯಾಮೆರಾ ಮೂಲಕ ಸೆರೆಹಿಡಿಯಬಹುದು. ಬಾಗಿದ ವಿನ್ಯಾಸದೊಂದಿಗೆ ನಿಮ್ಮ ಕೈಯಲ್ಲಿ ಅತ್ಯಾಕರ್ಷಕವಾಗಿ ಕಾಣುವದರಲ್ಲಿ ಅನುಮಾನವೇ ಇಲ್ಲ.

ವರದಿಗಳ ಪ್ರಕಾರ ಎಡ್ಜ್ ಇನ್’ಬ್ಯುಲ್ಟ್ ರೆಟಿನಾ ಸ್ಕ್ಯಾನರ್ ಹೊಂದಿದೆ. ಜೊತೆಗೆ 128 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದ್ದು, 256 ಜಿಬಿ ವರೆಗೂ ಮೈಕ್ರೋ ಎಸ್ಡಿ ಕಾರ್ಡ್ ಮೂಲಕ ವಿಸ್ತರಿಸಿಕೊಳ್ಳಬಹುದಾಗಿದೆ. ಹೊಚ್ಚ ಹೊಸ ಆಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್ 7.1.1 ನೌಗಟ್ ಹೊಂದಿದೆ. ಬ್ಯಾಟರಿ ಸಾಮರ್ಥ್ಯದ ಬಗ್ಗೆ ಇನ್ನೂ ಖಚಿತ ವಿವರ ತಿಳಿದು ಬಂದಿಲ್ಲ.

ಮೊಬೈಲ್ ಕಳ್ಳರಿಗಿದು ಕಹಿ ಸುದ್ದಿಯಂತೆ ಯಾಕೆ ಗೊತ್ತಾ…?

ಅಧಿಕೃತವಾಗಿ ಇನ್ನೂ ಬಿಡುಗಡೆ ಕುರಿತು ಪ್ರಕಟಣೆ ಹೊರಬೀಳದ ಈ ಸ್ಮಾರ್ಟ್ ಫೋನ್ ಬೆಲೆ ಮತ್ತು ಬಿಡುಗಡೆ ದಿನಾಂಕವನ್ನು ತಮ್ಮೊಂದಿಗೆ ಮುಂದಿನ ದಿನಗಳಲ್ಲಿ ಹಂಚಿಕೊಳ್ಳಲಿದ್ದೇವೆ.