ನೋಕಿಯಾದಿಂದ ಮೂರು ಸ್ಮಾರ್ಟ್ ಫೋನ್ ಗಳ ಬಿಡುಗಡೆ |News Mirchi

ನೋಕಿಯಾದಿಂದ ಮೂರು ಸ್ಮಾರ್ಟ್ ಫೋನ್ ಗಳ ಬಿಡುಗಡೆ

ನೋಕಿಯಾ ಬ್ರಾಂಡ್ ಹೆಸರಿನಲ್ಲಿ ಸ್ಮಾರ್ಟ್ ಫೋನ್ ಗಳನ್ನು ತಯಾರಿಸಿ ಮಾರಾಟ ಮಾಡಲು ಅನುಮತಿ ಪರವಾನಗಿ ಹೊಂದಿರುವ ಹೆಚ್.ಎಂ.ಡಿ ಗ್ಲೋಬಲ್ ಸಂಸ್ಥೆ ನೋಕಿಯಾ 3, ನೋಕಿಯಾ 5 ಮತ್ತು ನೋಕಿಯಾ 6 ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ವರ್ಷದ ಆರಂಭದಲ್ಲಿ ಈ ಮೂರು ಸ್ಮಾರ್ಟ್ ಫೋನ್ ಗಳನ್ನು ಮೊಬೈಲ್ ವರ್ಲ್ಡ್ ಕಾಂಗ್ರೆಸ್ ನಲ್ಲಿ ಅನಾವರಣಗೊಳಿಸಲಾಗಿತ್ತು. ಈ ಮೂರು ಸ್ಮಾರ್ಟ್ ಫೋನ್ ಗಳು ಕ್ರಮವಾಗಿ ರೂ.9,499, ರೂ.12,899 ಮತ್ತು ರೂ. 14,999 ಗಳಲ್ಲಿ ಲಭ್ಯವಿದೆ. ನೋಕಿಯಾ 3 ಮತ್ತು 5 ರೀಟೇಲ್ ಮಳಿಗೆಗಳಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ ಮತ್ತು ನೋಕಿಯಾ 6 ಅಮೆಜಾನ್ ವೆಬ್ಸೈಟ್ ಮೂಲಕ ಖರೀದಿಸಬಹುದು.

  • No items.

ನೋಕಿಯಾ 3
ನೋಕಿಯಾ 3 ರ ವೈಶಿಷ್ಟ್ಯಗಳು
1,280X720 ಪಿಕ್ಸೆಲ್ ರೆಸೊಲ್ಯೂಷನ್ ಹೊಂದಿರುವ 5 ಇಂಚಿನ ಡಿಸ್ ಪ್ಲೇ
ಮೀಡಿಯಾ ಟೆಕ್ MT6737 ಕ್ವಾಡ್ ಕೋರ್ ಪ್ರೊಸೆಸರ್
2 ಜಿಬಿ ರ‍್ಯಾಮ್
16 ಜಿಬಿ ಇಂಟರ್ನಲ್ ಸ್ಟೋರೇಜ್
128 ಜಿಬಿ ವರೆಗೂ ವಿಸ್ತರಿಸಬಲ್ಲ ಸಾಮರ್ಥ್ಯ
ಆಂಡ್ರಾಯ್ಡ್ ನೌಗಟ್

ನೋಕಿಯಾ 5 ವೈಶಿಷ್ಟ್ಯಗಳು
1,280X720 ಪಿಕ್ಸೆಲ್ ರೆಸೊಲ್ಯೂಷನ್ ನ 5.2 ಇಂಚು ಡಿಸ್ ಪ್ಲೇ
3,000 mAh ಬ್ಯಾಟರಿ
ಕ್ವಾಲ್ ಕಾಮ್ ಸ್ನ್ಯಾಪ್ ಡ್ರ್ಯಾಗನ್ 430 ಆಕ್ಟಾಕೋರ್ ಪ್ರೊಸೆಸರ್
2 ಜಿಬಿ ರ‍್ಯಾಮ್
16 ಜಿಬಿ ಇಂಟರ್ನಲ್ ಸ್ಟೋರೇಜ್
128 ಜಿಬಿ ವರೆಗೂ ವಿಸ್ತರಿಸಬಲ್ಲ ಸಾಮರ್ಥ್ಯ
ಆಂಡ್ರಾಯ್ಡ್ ನೌಗಟ್

ನೋಕಿಯಾ 6
1,920×1,080 ರೆಸೊಲ್ಯೂಷನ್ ನ 5.5 ಇಂಚಿನ ಡಿಸ್ ಪ್ಲೇ
ಕ್ವಾಲ್ ಕಾಮ್ ಸ್ನ್ಯಾಪ್ ಡ್ರ್ಯಾಗನ್ 430 ಪ್ರೊಸೆಸರ್
4 ಜಿಬಿ ರ‍್ಯಾಮ್
32 ಜಿಬಿ ಇಂಟರ್ನಲ್ ಸ್ಟೋರೇಜ್
128 ಜಿಬಿ ವಿಸ್ತರಿಸಬಲ್ಲ ಸಾಮರ್ಥ್ಯ
3,000 mAh ಬ್ಯಾಟರಿ
ಆಂಡ್ರಾಯ್ಡ್ ನೌಗಟ್

Loading...
loading...
error: Content is protected !!