3 ವರ್ಷದಲ್ಲಿ ಪತ್ತೆಯಾಗಿದ್ದು 71,941 ಕೋಟಿ ಅಘೋಷಿತ ಆದಾಯ |News Mirchi

3 ವರ್ಷದಲ್ಲಿ ಪತ್ತೆಯಾಗಿದ್ದು 71,941 ಕೋಟಿ ಅಘೋಷಿತ ಆದಾಯ

ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿ, ಮುಟ್ಟುಗೋಲು ಮತ್ತು ಸರ್ವೇಗಳಲ್ಲಿ ರೂ.71,941 ಕೋಟಿ ಅಘೋಷಿತ ಆದಾಯ ಪತ್ತೆಯಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೇಳಿದೆ. ನೋಟು ರದ್ದಾದ 2016 ನವೆಂಬರ್ 9 ರಿಂದ ಈ ಜನವರಿ 10 ರವರೆಗಿನ ಅವಧಿಯಲ್ಲಿ ರೂ.5,400 ಕೋಟಿಗೂ ಹೆಚ್ಚು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪತ್ತೆಯಾಗಿರುವುದಾಗಿ ಹೇಳಿದೆ.

ಹಾಗೆಯೇ 303.367 ಕೆಜಿ ಚಿನ್ನವನ್ನು ಜಪ್ತಿ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಸುಪ್ರೀಂ ಕೋರ್ಟ್ ಗೆ ಹೇಳಿದೆ. 2014 ಏಪ್ರಿಲ್ 1 ರಿಂದ ಈ ಫೆಬ್ರವರಿ 28 ರವರೆಗಿನ ಮೂರು ವರ್ಷಗಳ ಅವಧಿಯಲ್ಲಿ(ನೋಟು ರದ್ದಾದ ಅವಧಿಯೂ ಸೇರಿ) ತೆರಿಗೆ ಪಾವತಿಸದ ಆದಾಯ ವಿವರಗಳನ್ನು ನ್ಯಾಯಾಲಯದ ಮುಂದಿಟ್ಟಿತು.

ಈ ಮೂರು ವರ್ಷಗಳ ಅವಧಿಯಲ್ಲಿ ನಡೆಸಿದ ದಾಳಿಗಳ ಮೂಲಕ ರೂ.36,051 ಕೋಟಿ, 15 ಸರ್ವೇಗಳ ಮೂಲಕ ರೂ.33,000 ಕೋಟಿ ಅಘೋಷಿತ ಆದಾಯವನ್ನು ಪತ್ತೆ ಹಚ್ಚಿದ್ದಾಗಿ ಹೇಳಿದೆ. ಇದಲ್ಲದೆ ರೂ. 2,890 ಕೋಟಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಕೇಂದ್ರ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಹೇಳಿದೆ.

Loading...
loading...
error: Content is protected !!