ಜಪಾನ್ ಸಮುದ್ರದೊಳಗೆ ಕ್ಷಿಪಣಿ ಹಾರಿಸಿದ ಉತ್ತರ ಕೊರಿಯಾ – News Mirchi

ಜಪಾನ್ ಸಮುದ್ರದೊಳಗೆ ಕ್ಷಿಪಣಿ ಹಾರಿಸಿದ ಉತ್ತರ ಕೊರಿಯಾ

ಅಗ್ರ ದೇಶಗಳ ಎಚ್ಚರಿಕೆಯ ನಡುವೆಯೂ ಮತ್ತೊಮ್ಮೆ ಉತ್ತರ ಕೊರಿಯಾ ತನ್ನ ಆಕ್ರಮಣಕಾರಿ ನಿಲುವು ಪ್ರದರ್ಶಿಸಿದೆ. ಜಪಾನ್ ಸಮುದ್ರದಲ್ಲಿ ಒಂದು ಖಂಡಾಂತರ ಕ್ಷಿಪಣಿಯನ್ನು ಹಾರಿಸಿದೆ. ಇದು ನೆರೆಯ ದೇಶಗಳ ಆಕ್ರೋಶಕ್ಕೆ ಕಾರಣವಾಗಿದೆ. ಉತ್ತರ ಕೊರಿಯಾದ ಈ ಪ್ರಯೋಗವನ್ನು ದಕ್ಷಿಣ ಕೊರಿಯಾ ಮತ್ತು ಅಮೆರಿಕಾ ಖಚಿತಪಡಿಸಿವೆ.

ಮಧ್ಯಮ ಶ್ರೇಣಿಯ ಖಂಡಾಂತರ ಕ್ಷಿಪಣಿಯನ್ನು ಉತ್ತರ ಕೊರಿಯಾ ಪ್ರಯೋಗಿಸಿದ್ದು, ಅದು ಜಪಾನ್ ಸಮುದ್ರ ವ್ಯಾಪ್ತಿಯಲ್ಲಿ ಕುಸಿದಿದೆ ಎಂದು ದಕ್ಷಿಣ ಕೊರಿಯಾ ಬಹಿರಂಗಪಡಿಸಿದೆ. ಉತ್ತರ ಕೊರಿಯಾದ ಇಂತಹ ಆಕ್ರಮಣಕಾರಿ ಪ್ರಯೋಗಗಳು ಇದೇ ಮೊದಲಲ್ಲ. ಈ ಹಿಂದೆಯೂ ದಕ್ಷಿಣ ಕೊರಿಯಾ ಮತ್ತು ಜಪಾನ್ ಜಲ ವ್ಯಾಪ್ತಿಯಲ್ಲಿ ಕ್ಷಿಪಣಿಗಳನ್ನು ಉಡಾಯಿಸಿತ್ತು.

ಮತ್ತೊಂದು ಕಡೆ ಉತ್ತರ ಕೊರಿಯಾಗೆ ಬುದ್ದಿ ಕಲಿಸಲು ಅಮೆರಿಕಾ ಮತ್ತು ಚೀನಾಗಳ ನಡುವೆ ಚರ್ಚೆ ನಡೆಯುತ್ತಿದೆ. ಶೀಘ್ರದಲ್ಲೇ ಉಭಯ ದೇಶಗಳ ನಾಯಕರು ಸಭೆ ಸೇರಲಿದ್ದಾರೆ. ಒಂದು ವೇಳೆ ಚೀನಾ ಬೆಂಬಲ ನೀಡದಿದ್ದರೂ ಏಕಾಂಗಿಯಾಗಿ ಉತ್ತರ ಕೊರಿಯಾವನ್ನು ಎದುರಿಸುವುದಾಗಿ ಅಮೆರಿಕಾ ಹೇಳಿದೆ.

Contact for any Electrical Works across Bengaluru

Loading...
error: Content is protected !!