ಜೈಲಿನಲ್ಲಿನ ಅಕ್ರಮಗಳನ್ನು ಪ್ರಶ್ನಿಸಿದ ರೂಪಾಗೆ ನೋಟೀಸ್ |News Mirchi

ಜೈಲಿನಲ್ಲಿನ ಅಕ್ರಮಗಳನ್ನು ಪ್ರಶ್ನಿಸಿದ ರೂಪಾಗೆ ನೋಟೀಸ್

ಮೈಸೂರು: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ವಿ.ಕೆ.ಶಶಿಕಲಾಗೆ ವಿಶೇಷ ಸವಲತ್ತು ನೀಡಲು ಹಿರಿಯ ಅಧಿಕಾರಿ 2 ಕೋಟಿ ಲಂಚ ಪಡೆದ ಆರೋಪ ಮತ್ತಿತರೆ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಧ್ವನಿಯೆತ್ತಿರುವ ಡಿಐಜಿ ರೂಪಾ ಅವರಿಗೆ ಸರ್ಕಾರದಿಂದ ನೋಟೀಸ್ ನೀಡಿಲಾಗಿದೆ. ಈ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೇಳಿದ್ದಾರೆ. ರೂಪಾ ಅವರು ಮಾಡಿರುವ ಆರೋಪಗಳ ಕುರಿತೂ ಉನ್ನತ ಮಟ್ಟದ ತನಿಖೆಗೆ ಆದೇಶಿಸಿರುವುದಾಗಿ ಅವರು ಹೇಳಿದ್ದಾರೆ.

ಕಾರಾಗೃಹದಲ್ಲಿ ನಡೆಯುವ ಅಕ್ರಮಗಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ನೀಡಬೇಕು. ಅದು ಬಿಟ್ಟು ಮಾಧ್ಯಮಗಳ ಮುಂದೆ ಹೋಗಿ ಹೇಳಿಕೆ ನೀಡುವುದು ಕಾನೂನು ಉಲ್ಲಂಘನೆಯಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಜೈಲಿನಲ್ಲಿದ್ದರೂ ಶಶಿಕಲಾಗೆ ರಾಜಾತಿಥ್ಯ, 2 ಕೋಟಿ ಲಂಚ!

ಶಶಿಕಲಾ ಅವರಿಗೆ ಜೈಲಿನಲ್ಲಿ ಊಟ ತಿಂಡಿ ಸಿದ್ಧಪಡಿಸಲು ವಿಶೇಷ ಅಡುಗೆ ಕೋಣೆ ನಿರ್ಮಿಸಿರುವುದು, ಸಂದರ್ಶನ ವೇಳೆಯಲ್ಲಿ ವಿನಾಯಿತಿ ನೀಡಿರುವುದು, ಇದಕ್ಕಾಗಿ ಹಿರಿಯ ಅಧಿಕಾರಿಗೆ 2 ಕೋಟಿ ಲಂಚ ನೀಡಿರುವ ಮಾತು ಕೇಳಿಬರುತ್ತಿರುವ ಬಗ್ಗೆ ಡಿಐಜಿ ರೂಪಾ ವರದಿ ನೀಡಿದ್ದರು. ಜೈಲಿನಲ್ಲಿ ಅಕ್ರಮ ಗಾಂಜಾ ಸರಬರಾಜು, ತೆಲಗಿಗೆ ನಿಯಮ ಉಲ್ಲಂಘಿಸಿ ಮೈಕೈ ಒತ್ತಲು ನಾಲ್ಕ ಜನ ವಿಚಾರಣಾಧೀನ ಖೈದಿಗಳನ್ನು ಒದಗಿಸಿರುವುದು ಮುಂತಾದ ವಿಷಯಗಳು ಗೊತ್ತಿದ್ದರೂ ಕ್ರಮ ಕೈಗೊಂಡಿಲ್ಲವೆಂದು ಕಾರಾಗೃಹ ಡಿಜಿಪಿ ಸತ್ಯನಾರಾಯಣ ರಾವ್ ಅವರನ್ನು ರೂಪಾ ಪ್ರಶ್ನಿಸಿದ್ದರು.

ದೇಗುಲದಲ್ಲಿ ಸಿಕ್ಕ ರಹಸ್ಯ ಕೋಣೆ!

ಆರೋಪಗಳು ಕೇಳಿಬರುತ್ತಿದ್ದಂತೆ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಿತ್ತು. ತಮ್ಮ ಮೇಲಿನ ಆರೋಪವನ್ನು ಅಲ್ಲಗೆಳೆದಿದ್ದ ಡಿಜಿಪಿ ಸತ್ಯನಾರಾಯಣ ಅವರು, ಯಾವುದೇ ತನಿಖೆಗೂ ಸಿದ್ಧರಿರುವುದಾಗಿ ಹೇಳಿದ್ದರು.

Loading...
loading...
error: Content is protected !!