ರವೀಂದ್ರ ಗಾಯಕ್ವಾಡ್ ಗೆ ಈ ಬಾರಿ ಸ್ಪೈಸ್ ಜೆಟ್ ನಿಂದ ಶಾಕ್ |News Mirchi

ರವೀಂದ್ರ ಗಾಯಕ್ವಾಡ್ ಗೆ ಈ ಬಾರಿ ಸ್ಪೈಸ್ ಜೆಟ್ ನಿಂದ ಶಾಕ್

ಏರ್ ಇಂಡಿಯಾ ಸಿಬ್ಬಂದಿಯನ್ನು ಚಪ್ಪಲಿಯಲ್ಲಿ ಹೊಡೆದು ದುರಹಂಕಾರದಿಂದ ವರ್ತಿಸಿದ್ದ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ ಗೆ ಮತ್ತೊಮ್ಮೆ ಕಹಿ ಅನುಭವವಾಗಿದೆ. ಈಗಾಗಲೇ ಐದು ಬಾರಿ ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನ ಹತ್ತಲು ಪ್ರಯತ್ನಿಸಿ ವಿಫಲವಾದ ಗಾಯಕ್ವಾಡ್ ಇದೀಗ ಖಾಸಗಿ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್ ನಿಂದಲೂ ತಿರಸ್ಕೃತಗೊಂಡಿದ್ದಾರೆ.

ಸೋಮವಾರ ಪುಣೆಯಿಂದ ಅಹಮದಾಬಾದ್ ಗೆ ಪ್ರಯಾಣಿಸಲು ಶನಿವಾರ ರೂ.4,504 ಪಾವತಿಸಿ ಟಿಕೆಟ್ ಕೊಳ್ಳಲು ಗಾಯಕ್ವಾಡ್ ಪ್ರಯತ್ನಿಸಿದಾಗ, ಪ್ರಯಾಣಿಕರ ಹೆಸರು ರವೀಂದ್ರ ಗಾಯಕ್ವಾಡ್ ಎಂದು ತಿಳಿದೊಡನೆ ಸ್ಪೈಸ್ ಜೆಟ್ ಕೂಡಲೇ ಟಿಕೆಟ್ ಬುಕಿಂಗ್ ರದ್ದುಗೊಳಿಸಿದೆ. ಈ ವಿಷಯವನ್ನು ಸ್ಪೈಸ್ ಜೆಟ್ ವಕ್ತಾರರೊಬ್ಬರು ಹೇಳಿದ್ದಾರೆ.

ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯ ಸಿಬ್ಬಂದಿ ವಿರುದ್ಧ ದುರ್ವರ್ತನೆ ತೋರಿದ ಗಾಯಕ್ವಾಡ್ ರನ್ನು ಏರ್ ಇಂಡಿಯಾ ಕಪ್ಪು ಪಟ್ಟಿಗೆ ಸೇರಿಸಿದ್ದು, ಈಗಾಗಲೇ ಐದು ಬಾರಿ ಏರ್ ಇಂಡಿಯಾ ಟಿಕೆಟ್ ಬುಕ್ ಮಾಡಲು ಪ್ರಯತ್ನಿಸಿದ ಗಾಯಕ್ವಾಡ್ ಗೆ ಅಷ್ಟೂ ಬಾರಿ ಟಿಕೆಟ್ ನಿರಾಕರಿಸಿದೆ.

Loading...
loading...
error: Content is protected !!