ಎನ್‌ಎಸ್‌ಜಿ ಆಡಿಟೋರಿಯಂ ಗೆ ಪಠಾಣ್ ಕೋಟ್ ಹುತಾತ್ಮನ ಹೆಸರು

ಹರಿಯಾಣದ ಮನೇಸರ್ ನಲ್ಲಿರುವ ಎನ್‌ಎಸ್‌ಜಿ ಹೆಡ್ ಕ್ವಾರ್ಟರ್ಸ್ ನಲ್ಲಿ ನೂತನವಾಗಿ ನಿರ್ಮಿಸಿರುವ ಆಡಿಟೋರಿಯಂ ಗೆ ಹುತಾತ್ಮ ಯೋಧ ಲೆಫ್ಟಿನೆಂಟ್‌ ಕರ್ನಲ್ ಇ.ಕೆ.ನಿರಂಜನ್ ಹೆಸರಿಟ್ಟಿದ್ದಾರೆ. ಎನ್‌ಎಸ್‌ಜಿ ಯಲ್ಲಿ ಬಾಂಬ್ ನಿಷ್ಕ್ರಿಯ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ವಾಯುನೆಲೆ ಮೇಲೆ ನಡೆದ ಉಗ್ರರ ದಾಳಿಯಲ್ಲಿ ನಿರಂಜನ್ ಹುತಾತ್ಮರಾಗಿದ್ದರು.

“ನಿರಂಜನ್ ಆಡಿಟೋರಿಯಂ” ಅನ್ನು ಕೇಂದ್ರ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ನಿರಂಜನ್ ಅವರ ತಂದೆಯವರ ಜೊತೆ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ನಿರಂಜನ್ ತಾಯಿ ರಾಧಾ ಶಿವರಾಜನ್, ಸಹೋದರ ಮತ್ತು ಏರ್ ಫೋರ್ಸ್ ಅಧಿಕಾರಿ ಶಾರದ್ ಪಾಲ್ಗೊಂಡಿದ್ದರು.

Loading...

Leave a Reply

Your email address will not be published.

error: Content is protected !!