ಭಾರತದ ಎನ್.ಎಸ್.ಜಿ ಸೇರ್ಪಡೆ ಕುರಿತು ತೀರ್ಮಾನಕ್ಕೆ ಬರಲು ಸರ್ವಸದಸ್ಯ ಸಭೆ ವಿಫಲ – News Mirchi

ಭಾರತದ ಎನ್.ಎಸ್.ಜಿ ಸೇರ್ಪಡೆ ಕುರಿತು ತೀರ್ಮಾನಕ್ಕೆ ಬರಲು ಸರ್ವಸದಸ್ಯ ಸಭೆ ವಿಫಲ

ಪರಮಾಣು ಪೂರೈಕೆದಾರರ ಗುಂಪಿನಲ್ಲಿ(ಎನ್.ಎಸ್.ಜಿ) ಸದಸ್ಯತ್ವಕ್ಕಾಗಿ ಭಾರತ ಸಲ್ಲಿಸಿದ್ದ ಅರ್ಜಿಯ ಕುರಿತು ತೀರ್ಮಾನ ಕೈಗೊಳ್ಳಲು ಸ್ವಿಡ್ಜರ್ ಲ್ಯಾಂಡ್ ನ ರಾಜಧಾನಿ ಬರ್ನ್ ನಲ್ಲಿ ಕರೆದಿದ್ದ ಪರಮಾಣು ಪೂರೈಕೆದಾರರ ಗುಂಪಿನ ಸರ್ವಸದಸ್ಯರ ಗುಂಪು ಯಾವುದೇ ನಿರ್ಧಾರಕ್ಕೆ ಬರಲು ವಿಫಲವಾಗಿದೆ.

ಭಾರತವು ಪರಮಾಣು ಪ್ರಸರಣಾ ವಿರೋಧಿ ಒಪ್ಪಂದಕ್ಕೆ (ಎನ್.ಪಿ.ಟಿ) ಸಹಿ ಹಾಕಿಲ್ಲವೆಂಬ ಕಾರಣವನ್ನು ಮುಂದಿಟ್ಟುಕೊಂಡು, ಚೀನಾ ಮೊದಲಿನಿಂದಲೂ ಪರಮಾಣು ಪೂರೈಕೆದಾರರ ಗುಂಪಿಗೆ(ಎನ್.ಎಸ್.ಜಿ) ಸೇರಲು ಭಾರತ ನಡೆಸುತ್ತಿರುವ ಪ್ರಯತ್ನಕ್ಕೆ ಚೀನಾ ಅಡ್ಡಗಾಲು ಹಾಕುತ್ತಿದೆ. ಭಾರತ ಎನ್.ಎಸ್.ಜಿ ಸದಸ್ಯತ್ವ ಪಡೆಯಬೇಕಾದರೆ ಎನ್.ಎಸ್.ಜಿ ಯ ಎಲ್ಲಾ ಸದಸ್ಯ ದೇಶಗಳ ಒಪ್ಪಿಗೆ ಬೇಕಾಗುವುದರಿಂದ, ಈ ವಿಷಯದಲ್ಲಿ ಚೀನಾ ಭಾರತಕ್ಕೆ ದೊಡ್ಡ ತಲೆನೋವಾಗಿದೆ.

ಎನ್.ಎಸ್.ಜಿ ಯಲ್ಲಿ ಭಾಗವಹಿಸುವ ಎನ್.ಪಿ.ಟಿ ಗೆ ಸಹಿ ಹಾಕದ ದೇಶಗಳ ತಾಂತ್ರಿಕ, ಕಾನೂನು ಮತ್ತು ರಾಜಕೀಯ ಅಂಶಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯು ಚರ್ಚೆಯನ್ನು ಮುಂದುವರೆಸಲು ನಿರ್ಧರಿಸಿದ್ದು, ನವೆಂಬರ್ ನಲ್ಲಿ ಮತ್ತೊಮ್ಮೆ ಅನೌಪಚಾರಿಕ ಸಭೆ ಸೇರಲು ತೀರ್ಮಾನಿಸಿದೆ.

Click for More Interesting News

Loading...
error: Content is protected !!