ಜರ್ಮನಿಯ ಹೆಸರಲ್ಲಿದ್ದ ಗಿನ್ನಿಸ್ ದಾಖಲೆ ಮುರಿದ ಒಡಿಶಾದ ಯುವಕ

ಭುವನೇಶ್ವರ್: ಒಡಿಶಾದ ಯುವಕನೊಬ್ಬ ಗಿನ್ನಿಸ್ ಜರ್ಮನಿಯ ಹೆಸರಲ್ಲಿದ್ದ ದಾಖಲೆಯೊಂದನ್ನು ಮುರಿದಿದ್ದಾನೆ. ಒಂದೇ ಬಾರಿಗೆ 459 ಕುಡಿಯುವ ಸ್ಟ್ರಾಗಳನ್ನು ಹಲ್ಲುಗಳ ನಡುವೆ ಕಚ್ಚಿ ಹಿಡಿದು ಹೊಸ ದಾಖಲೆ ಬರೆದಿದ್ದಾನೆ. ಗಂಜಾಂ ಜಿಲ್ಲೆಯ ಬಾಬರಾಡಾ ಗ್ರಾಮದ ಮನೋಜ್ ಮಹಾರಾಣಾ ಈ ದಾಖಲೆ ಸೃಷ್ಟಿಸಿದಾತ. 10 ಸೆಕೆಂಡುಗಳ ಕಾಲ 459 ಕೊಳವೆಗಳನ್ನು ಹಲ್ಲುಗಳ ನಡುವೆ ಕಚ್ಚಿ ಹಿಡಿದು 8 ವರ್ಷಗಳಿಂದ ಯಾರೂ ಮುರಿಯಲಾರದ ದಾಖಲೆಯನ್ನು ಮುರಿದಿದ್ದಾನೆ.

ಈ ಹಿಂದಿನ ದಾಖಲೆ ಜರ್ಮನಿಯ ‘ಮಾರ್ಕ್ ಎನ್ ಸೈಮನ್’ ಎಲ್ಮೋರ್ ಎಂಬ ವ್ಯಕ್ತಿಯ ಹೆಸರಿನಲ್ಲಿತ್ತು. ಈತ 400 ಕೊಳವೆಗಳನ್ನು ಬಾಯಲ್ಲಿ ಹಿಡಿದು ದಾಖಲೆ ಮಾಡಿದ್ದ. ಇದೀಗ ಮನೋಜ್ ಮಹಾರಾಣಾ 459 ಕೊಳವೆಗಳನ್ನು ಬಾಯಲ್ಲಿ ಹಿಡಿದು ಹೊಸ ದಾಖಲೆ ಮಾಡಿದ್ದಾನೆ. ಕೈಗಳ ಸಹಾಯವಿಲ್ಲದೆ ಇವಿಷ್ಟೂ ಕೊಳವೆಗಳನ್ನು ಬಾಯಲ್ಲಿ ಸಿಕ್ಕಿಸಿಕೊಳ್ಳುವುದು ಇದರ ವಿಶೇಷ.

ಈ ದಾಖಲೆ ಮಾಡುವುದಕ್ಕೂ ಮುಂಚೆ, ಮನೋಜ್ ಹಲವು ಪ್ರಯೋಗಗಳನ್ನು ನಡೆಸಿದ್ದ. ಒಂದೇ ಬಾರಿಗೆ 21 ಮೇಣದ ಬತ್ತಿಗಳನ್ನು ಬಾಯಲ್ಲಿ ಹಿಡಿದು ಆಶ್ಚರ್ಯ ಮೂಡಿಸಿದ್ದ. ಇದೇ ಮೇ ತಿಂಗಳು 23 ರಂದು ಸ್ಥಳೀಯ ಸಬ್ ಕಲೆಕ್ಟರ್ ಸಮ್ಮುಖದಲ್ಲಿ ಈ ಕಸರತ್ತು ಮಾಡಿ ಭೇಷ್ ಎನಿಸಿಕೊಂಡಿದ್ದ.

ಅದಕ್ಕೂ ಮುನ್ನ ಬಾಯಿತುಂಬಾ ಬರೋಬ್ಬರಿ 90 ದಾಕ್ಷಿ ಹಣ್ಣುಗಳನ್ನು ತುಂಬಿಕೊಂಡು ಪ್ರದರ್ಶನ ನೀಡಿದ್ದ. ಹೀಗೆ ಹಂತ ಹಂತವಾಗಿ ಬೆಳೆದು ಗಿನ್ನಿಸ್ ದಾಖಲೆಗೆ ಶ್ರಮಿಸಿ ಸಫಲನಾಗಿದ್ದಾನೆ. [ಇದನ್ನೂ ಓದಿ: ಪಾಕ್ ರಕ್ಷಣಾ ಇಲಾಖೆಯ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆಗಿದ್ದೇಕೆ ಗೊತ್ತಾ?]

Get Latest updates on WhatsApp. Send ‘Add Me’ to 8550851559