ಪ್ರತ್ಯೇಕ ರಾಜ್ಯಕ್ಕಾಗಿ ಹೊತ್ತಿ ಉರಿಯುತ್ತಿರುವ ಡಾರ್ಜಲಿಂಗ್ |News Mirchi

ಪ್ರತ್ಯೇಕ ರಾಜ್ಯಕ್ಕಾಗಿ ಹೊತ್ತಿ ಉರಿಯುತ್ತಿರುವ ಡಾರ್ಜಲಿಂಗ್

ಡಾರ್ಜಲಿಂಗ್: ಪ್ರತ್ಯೇಕ ರಾಜ್ಯ ಗೂರ್ಖಾಲ್ಯಾಂಡ್ ಬೇಕೆಂದು ಒತ್ತಾಯಿಸಿ ಅಲ್ಲಿನ ಜನರು ಹಿಂಸಾತ್ಮಕ ಪ್ರತಿಭಟನೆಗೆ ಇಳಿದಿದ್ದು, ಪಶ್ಚಿಮ ಬಂಗಾಳದ ಡಾರ್ಜಲಿಂಗ್ ಹೊತ್ತಿ ಉರಿಯುತ್ತಿದೆ. ಗೂರ್ಖಾಲ್ಯಾಂಡ್ ಪ್ರತ್ಯೇಕ ರಾಜ್ಯವಾಗಬೇಕೆಂದು ಗೂರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ನೇತೃತ್ವದಲ್ಲಿ ಕೈಗೊಂಡಿರುವ ಅನಿರ್ದಿಷ್ಟ ಬಂದ್ ಶನಿವಾರಕ್ಕೆ ಆರನೇ ದಿನಕ್ಕೆ ಕಾಲಿಟ್ಟಿದೆ.

ಶುಕ್ರವಾರ ರಾತ್ರಿ ಜಿಜೆಎಂ ಶಾಸಕ ಅಮರ್ ರಾಯ್ ಪುತ್ರ ವಿಕ್ರಮ ರಾಯ್ ರವರನ್ನು ಪೊಲೀಸರು ಬಂಧಿಸಿದರು. ಹೀಗಾಗಿ ಡಾರ್ಜಲಿಂಗ್ ನಲ್ಲಿ ಜಿಜೆಎಂ ಬೆಂಬಲಿಗರ ಪ್ರತಿಭಟನೆ ಹಿಂಸೆಗೆ ತಿರುಗಿತು. ಬಿಜೋನ್ ಬರಿ ಯಲ್ಲಿರುವ ಪಬ್ಲಿಕ್ ವರ್ಕ್ಸ್ ಡಿಪಾರ್ಟ್ ಮೆಂಟ್ ಕಛೇರಿಗೆ ಬೆಂಕಿ ಹಚ್ಚಿದರು. ಜಿಜೆಎಂ ಬೆಂಬಲಿಗರು ಪೊಲೀಸರ ಮೇಲೆ ಕಲ್ಲು, ಬಾಟಲ್ ಎಸೆತಕ್ಕೆ ಮುಂದಾಗಿದ್ದರಿಂದ ಪೊಲೀಸರು ಅನಿವಾರ್ಯವಾಗಿ ಲಾಠಿ ಚಾರ್ಜ್ ಮಾಡಬೇಕಾಯಿತು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಟಿಯರ್ ಗ್ಯಾಸ್ ಪ್ರಯೋಗಿಸಲಾಯಿತು. ಈ ವೇಳೆ ಪ್ರತಿಭಟನಾಕಾರರೊಂದಿಗೆ ಪೊಲೀಸರೂ ಕೂಡಾ ಗಾಯಗೊಂಡರು.

ಮತ್ತೊಂದು ಕಡೆ ಜಿಜೆಎಂ ಅಸಿಸ್ಟೆಂಟ್ ಜನರಲ್ ಸೆಕ್ರಟರಿ ಬಿನಯ್ ತಮಾಂಗ್, ತಮ್ಮ ಮನೆಯ ಮೇಲೆ ಶುಕ್ರವಾರ ಪೊಲೀಸರು, ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ದಾಳಿ ನಡೆಸಿದರು ಎಂದು ಆರೋಪಿಸಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಪಶ್ಚಿಮ ಬಂಗಾಳ ಸರ್ಕಾರ ಸೇನೆಯನ್ನು ಕಣಕ್ಕಿಳಿಸಿದೆ. ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾಪಡೆಗಳು ರೂಟ್ ಮಾರ್ಚ್ ನಡೆಸಿದರು.

Loading...
loading...
error: Content is protected !!