ಪಾಕ್ ಗೆ ಭಾರತೀಯ ನೌಕಾಪಡೆ ನೀಡಿದ ಮೊದಲ ಆಘಾತದ ನೆನಪು ಡಿ.4

ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಭಾರತೀಯ ನೌಕಾಪಡೆಯು ವಿಶಾಲವಾಸ ಸಮುದ್ರ ಗಡಿಯನ್ನು ರಕ್ಷಿಸಲು ಅವಿರತವಾಗಿ ಶ್ರಮಿಸುತ್ತಿದೆ. ಡಿಸೆಂಬರ್ 4 ರಂದು ಭಾರತೀಯ ನೌಕಾಪಡೆಯ ದಿನವಾಗಿ ಪ್ರತಿವರ್ಷ ಆಚರಿಸಲಾಗುತ್ತದೆ. ಡಿಸೆಂಬರ್ 4 ರಂದೇ ಮೊಟ್ಟ ಮೊದಲ ಬಾರಿಗೆ ನೌಕಾಪಡೆ ಪಾಕಿಸ್ತಾನದ ಕರಾಚಿ ಬಂದರುಗಳ ಮೇಲೆ ಮೇಲೆ ದಾಳಿ ನಡೆಸಿ ಯಶಸ್ವಿಯಾಗಿದ್ದು. ಇದು 1971 ರ ಇಂಡೋ ಪಾಕ್ ಯುದ್ಧದಲ್ಲಿ ಭಾರತ ಗೆಲ್ಲಲು ನೆರವಾದ ಯಶಸ್ವಿ ಟ್ರೈಡೆಂಟ್ ಆಪರೇಷನ್ ಅನ್ನು ನೆನಪಿಸುತ್ತದೆ.

ಏನಿದು ಆಪರೇಷನ್ ಟ್ರೈಡೆಂಟ್

ನವೆಂಬರ್ 23, 1971 ರಂದು ಪಾಕಿಸ್ತಾನವು ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿತ್ತು. ಇದರ ನಂತರ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಉದ್ವಿಘ್ನ ಪರಿಸ್ಥಿತಿಗಳು ಹೆಚ್ಚಾದವು. ಡಿಸೆಂಬರ್ 3 ರಂದು ಪಾಕಿಸ್ತಾನ ವಿಮಾನವೊಂದು 6 ಭಾರತೀಯ ವಿಮಾನ ನಿಲ್ದಾಣಗಳ ಮೇಲೆ ದಾಳಿ ನಡೆಸಿತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದ ಪ್ರಮುಖ ಕಡಲ ವ್ಯಾಪಾರ ಕೇಂದ್ರವಾಗಿರುವ ಕರಾಚಿ ಮೇಲೆ ದಾಳಿ ನಡೆಸಲು ಭಾರತೀಯ ನೌಕಾಪಡೆಯು ಯುದ್ಧ ನೌಕೆಗಳ ವಿಶೇಷ ಗುಂಪನ್ನು ರಚಿಸಿತು. ಈ ಗುಂಪಿನಲ್ಲಿ ಮೂರು ಸೋವಿಯತ್ ನಿರ್ಮಿತ ಒಎಸ್ಎ-1 ಕ್ಲಾಸ್ ಕ್ಷಿಪಣಿ ಯುದ್ಧ ನೌಕೆಗಳಾದ ಐಎನ್ಎಸ್ ನಿಪಾತ್, ಐಎನ್ಎಸ್ ನಿರ್ಘಾಟ್ ಮತ್ತು ಐಎನ್ಎಸ್ ವೀರ್ ಗಳಿದ್ದವು. ಪ್ರತಿ ನೌಕೆಯು ನಾಲ್ಕು ಸ್ಟಿಕ್ಸ್ ಕ್ಷಿಪಣಿಗಳನ್ನು ಹೊಂದಿದ್ದವು. ಈ ನೌಕೆಗಳನ್ನು ರಕ್ಷಿಸಲು 2 ಜಲಾಂತರ್ಗಾಮಿ ನೌಕೆಗಳನ್ನು ಬೆಂಗಾವಲಾಗಿ ಕಳುಹಿಸಲಾಗಿತ್ತು.

ಕಾರ್ಯಚರಣೆ ತಂಡದ ಕ್ಷಿಪಣಿ ನೌಕೆಗಳು ತಮ್ಮ ಕ್ಷಿಪಣಿಗಳನ್ನು ಪಾಕಿಸ್ತಾನದ ನೌಕಾಪಡೆಗೆ ಸೇರಿದ ವಿವಿಧ ಪ್ರದೇಶಗಳು, ನೌಕೆಗಳ ಮೇಲೆ ಹಾರಿಸುವ ಜವಾಬ್ದಾರಿಯನ್ನು ಹೊತ್ತಿದ್ದವು. ಈ ನೌಕೆಗಳನ್ನು ಕರಾವಳಿ ರಕ್ಷಣೆಗಾಗಿ ವಿನ್ಯಾಸಗೊಳಿಸಲಾಗಿತ್ತಾದರೂ, ಕರಾಚಿ ಮೇಲೆ ಆಕ್ರಮಣ ಮಾಡಿ ಸುರಕ್ಷಿತವಾಗಿ ಹಿಂದಿರುಗುವ ವ್ಯಾಪ್ತಿಯನ್ನು ಹೊಂದಿರಲಿಲ್ಲ. ಆದ್ದರಿಂದ ಕರಾಚಿಗೆ ಆದಷ್ಟು ಸಮೀಪ ಈ ದೋಣಿಗಳು ಹರಿದಾಡುತ್ತಿದ್ದವು. ಕುತೂಹಲಕರ ವಿಷಯವೆಂದರೆ ಪಾಕಿಸ್ತಾನವು ನೌಕಾಪಡೆಗೆ ಸೇರಿಲ್ಲದ ಇತರೆ ಎಲ್ಲಾ ಹಡಗುಗಳನ್ನು ಬಂದರುಗಳಿಂದ 120 ಕಿ.ಮೀ ದೂರ ಉಳಿಯುವಂತೆ ಸೂಚಿಸಿತ್ತು.

ರಾತ್ರಿ 10 ಗಂಟೆ ವೇಳೆಯಲ್ಲಿ ಐಎನ್ಎಸ್ ನಿಪಾತ್ ನ ರಾಡಾರ್ ಸದ್ದು ಮಾಡಲು ಆರಂಭಿಸಿತು. ಶತೃದೇಶದ ಎರಡು ಯುದ್ಧ ನೌಕೆಗಳನ್ನು ಅದು ಗುರುತಿಸಿತ್ತು. ಐಎನ್ಎಸ್ ನಿರ್ಘಾಟ್ ಎರಡು ಕ್ಷಿಪಣಿಗಳನ್ನು ಹಾರಿಸಿತು, ಇದಕ್ಕೆ ಪಾಕಿಸ್ತಾನದ ಯುದ್ಧ ನೌಕೆ ಪಿಎನ್ಎಸ್ ಖೈಬರ್ ಅನ್ನು ಮುಳುಗಿಸಿತು. ಅದೇ ಸಂದರ್ಭದಲ್ಲಿ ಐಎನ್ಎಸ್ ನಿಪಾತ್ ಕೂಡಾ ಕ್ಷಿಪಣಿಗಳನ್ನು ಹಾರಿಸಿ ಪಾಕಿಸ್ತಾನ ಸೇನೆಗೆ ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ವ್ಯಾಪಾರಿ ಹಡಗು ಎಂ.ವಿ.ವೀನಸ್ ಚಾಲೆಂಜರ್ ಅನ್ನು ಮುಳುಗಿಸಿತು. ಅಷ್ಟೇ ಅಲ್ಲದೆ ಐಎನ್ಎಸ್ ನಿಪಾತ್ ಪಾಕಿಸ್ತಾನದ ಪಿಎನ್ಎಸ್ ಶಹಜಹಾನ್ ಗೆ ತೀವ್ರ ಹಾನಿ ಮಾಡಿತ್ತು.

ಭಾರತ ಐಎನ್ಎಸ್ ವೀರ್ ಕೂಡಾ ಪಾಕಿಸ್ತಾನದ ಸಿಡಿಗುಂಡು ನಿರೋಧಕ ಪಿಎನ್ಎಸ್ ಮುಹಾಫಿಜ್ ಅನ್ನು ಮುಳುಗಿಸಿತು. ನಂತರ ಪಾಕಿಸ್ತಾನದ ನೌಕಾಪಡೆಯ ಕೇಂದ್ರ ಕಛೇರಿಯು ಕರಾಚಿಯ ಮಸ್ರೂರ್ ವಾಯುನೆಲೆಯಿಂದ ಸಹಾಯ ಕೋರಿತು. ಆದರೆ ಅಲ್ಲಿಂದ ಅವರಿಗೆ ಯಾವ ಪ್ರತಿಕ್ರಿಯೆಯೂ ಬರಲಿಲ್ಲ. ಕಾರಣ ಅಷ್ಟೊತ್ತಿಗಾಗಲೇ ನಮ್ಮ ಭಾರತೀಯ ವಾಯುಪಡೆ ಆ ನೆಲೆಯ ಮೇಲೆ ಪೂರ್ವಯೋಜಿತವಾಗಿ ದಾಳಿ ಆರಂಭಿಸಿಯೇ ಬಿಟ್ಟಿತ್ತು. ಕರಾಚಿಯ ಬಂದರಿನ ತೈಲ ಡಿಪೋವನ್ನು ಐಎನ್ಎಸ್ ನಿಪಾತ್ ಗುರಿಯಾಗಿಸಿ ದಾಳಿ ಮಾಡಿ ಸುಟ್ಟು ಹಾಕಿತು.

ಭಾರತವನ್ನು ನಿಯಂತ್ರಿಸಲಾಗದೆ ಶ್ರೀಲಂಕಾ ನಾಟಕ?

ಭಾರತದ ಯಶಸ್ವಿ ಕಾರ್ಯಚರಣೆ ನಂತರ, ಆಕ್ರಮಣ ತಂಡವು ಭಾರತೀಯ ಬಂದರುಗಳಾದ ಮಂಗ್ರೋಲ್ ಗೆ ಬಂದು ನಂತರ ಮುಂಬೈ ತಲುಪಿದವು. ಆದರೆ ಎಂಜಿನ್ ನಲ್ಲಿ ಕಾಣಿಸಿಕೊಂಡ ಸಮಸ್ಯೆಯಿಂದಾಗಿ ಐಎನ್ಎಸ್ ನಿಪಾತ್ ಡಿಸೆಂಬರ್ 5 ರಂದು ಮಧ್ಯಾಹ್ನ ಮಂಗ್ರೋಲ್ ಬಂದರು ಬಂದು ತಲುಪಿತು.

ಭಾರತೀಯ ನೌಕಾಪಡೆಯು ಮೂರು ಪಾಕಿಸ್ತಾನಿ ಮುಂಚೂಣಿ ಯುದ್ಧ ನೌಕೆಗಳನ್ನು ಮುಳುಗಿಸಿ, ಒಂದು ತೈಲ ಸಂಗ್ರಹಣಾಗಾರವನ್ನು ನಾಶಗೊಳಿಸಿ ಆಘಾತ ನೀಡಿತು.

Get Latest updates on WhatsApp. Send ‘Add Me’ to 8550851559

Related News