ಬೆಂಗಳೂರು: ಹೊಸ ವರ್ಷಾಚರಣೆಯಲ್ಲಿದ್ದ ಮಹಿಳೆಯರಿಗೆ ಕಹಿ ಅನುಭವ – News Mirchi

ಬೆಂಗಳೂರು: ಹೊಸ ವರ್ಷಾಚರಣೆಯಲ್ಲಿದ್ದ ಮಹಿಳೆಯರಿಗೆ ಕಹಿ ಅನುಭವ

ಬೆಂಗಳೂರು: ಹೊಸ ವರ್ಷಾಚರಣೆಗೆ ನಗರದ ಎಂ.ಜಿ.ರಸ್ತೆ ಮತ್ರು ಬ್ರಿಗೇಡ್ ರಸ್ತೆಯಲ್ಲಿ ಸೇರಿದ್ದ ಮಹಿಳೆಯರ ಮೇಲೆ ಪುಂಡರ ಗುಂಪು ಚುಡಾಯಿಸಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಭದ್ರತೆಗಾಗಿ ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದರೂ ಘಟನೆಯನ್ನು ತಡೆಯಲು ವಿಫಲರಾಗಿದ್ದಾರೆ.

ಈ ವರ್ಷ ರಾತ್ರಿ 1:30 ರವರೆಗೂ ರಸ್ತೆಯಲ್ಲಿ ಮತ್ತು ಪಬ್ ಗಳಲ್ಲಿ ರಾತ್ರಿ 2 ರವರೆಗೂ ಸಂಭ್ರಮಾಚರಣೆ ಮಾಡಲು ಪೊಲೀಸರು ಅವಕಾಶ ನೀಡಿದ್ದರು. ಮಹಿಳೆಯರು ಪಬ್ ನಿಂದ ಹೊರಬರುತ್ತಿರುವ ವೇಳೆ ಪಾನಮತ್ತರಾದ ಪುಂಡರ ಗುಂಪು ಚುಡಾಯಿಸಿ ಹಲ್ಲೆ ನಡೆಸಲು ಮುಂದಾದರು.

ಅಸಹಾಯಕ ಮಹಿಳೆಯರು ಸಹಾಯಕ್ಕಾಗಿ ಪೊಲೀಸರತ್ತ ಓಡಿದರು. ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರಿಗೆ ಲಾಠಿ ಚಾರ್ಜ್ ಮಾಡಿ ಗುಂಪು ಚದುರಿಸುವುದು ಬಿಟ್ಟರೆ ಬೇರೆ ದಾರಿ ಇರಲಿಲ್ಲ. ಮೂಲಗಳ ಪ್ರಕಾರ ಇದುವರೆಗೂ ಯಾರ ಮೇಲೆಯೂ ದೂರು ದಾಖಲಾಗಿಲ್ಲ.

60 ಕ್ಕೂ ಹೆಚ್ಚು ಸಿಸಿಟಿವಿ ಅಳವಡಿಸಲಾಗಿದ್ದು, ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೂ ಸಾವಿರಾರು ಜನ ಅಲ್ಲಿ ಸೇರಿದ್ದರಿಂದ ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸ್ ಸಿಬ್ಬಂದಿಯ ಕೊರತೆ ಕಾಣುತ್ತಿತ್ತು.

Loading...

Leave a Reply

Your email address will not be published.