ಮತ್ತೆ ಕೇಜ್ರಿವಾಲ್ ಮೇಲೆ ಶೂ ಎಸೆತ

ಯುವಕನೊಬ್ಬ ದೆಹಲಿ ಮುಖ್ಯಮಂತ್ರಿ ಮೇಲೆ ಎಸೆದ ಘಟನೆ ರೋಹ್ಟಕ್ ಜಿಲ್ಲೆಯಲ್ಲಿ ನಡೆದಿದೆ. ಸಾರ್ವಜನಿಕ ಸಭೆಯಲ್ಲಿ ಕ್ರಮವನ್ನು ವಿರೋಧಿಸಿ ಭಾಷಣ ಮಾಡುತ್ತಿರುವ ವೇಳೆ ಈ ಘಟನೆ ನಡೆದಿದೆ. ಆದರೆ ಕೇಜ್ರಿವಾಲ್ ಅವರಿಗೆ ತಗಲದೆ ಗುರಿ ತಪ್ಪಿತ್ತು. ನಂತರ ಎಸೆದಾತನನ್ನು ಪೊಲೀಸರು ವಶಕ್ಕೆ ಪಡೆದರು.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ಈ ಘಟನೆ ಮೋದಿಯವರ ಹೇಡಿತನವನ್ನು ತೋರಿಸುತ್ತದೆ, ಈ ಹಿಂದೆಯೇ ಒಬ್ಬ ಹೇಡಿ ಎಂದು ನಾನು ಹೇಳಿದ್ದೆ. ಆದ್ದರಿಂದಲೇ ಈಗ ಶೋ ಎಸೆಯಲು ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ನೀವು ಶೂ ಎಸೆಯಬಹುದು ಅಥವಾ ಸಿಬಿಐ ದಾಳಿ ನಡೆಸಬಹುದು, ಇದ್ಯಾವುದೂ ಹಗರಣದ ವಿಷಯದಲ್ಲಿ ಸತ್ಯ ಮಾತನಾಡಲು ನನ್ನನ್ನು ತಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache