ಬಾಲಕಿಯ ಹೊಟ್ಟೆಯಲ್ಲಿ 1 ಕೆಜಿ ಕೂದಲು! |News Mirchi

ಬಾಲಕಿಯ ಹೊಟ್ಟೆಯಲ್ಲಿ 1 ಕೆಜಿ ಕೂದಲು!

15 ವರ್ಷದ ಬಾಲಕಿಗೆ ಶಸ್ತ್ರಚಿಕಿತ್ಸೆ ನಡೆಸಿ 1 ಕೆಜಿ ತೂಕದ ಕೂದಲಿನ ಉಂಡೆಯನ್ನು ಆಕೆಯ ಹೊಟ್ಟೆಯಿಂದ ಹೊರ ತೆಗೆದ ಘಟನೆ ಪಂಜಾಬ್ ನಲ್ಲಿ ನಡೆದಿದೆ.

ಬಾಲಕಿಗೆ ಏನೂ ತಿನ್ನಲು ಕುಡಿಯಲು ಸಾಧ್ಯವಾಗದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಕ್ಯಾನ್ ಮಾಡಿದ ವೈದ್ಯರಿಗೆ ಅಚ್ಚರಿ ಕಾದಿತ್ತು. ಕೂದಲುಗಳಿಂದ ಕೂಡಿದ ಭಾರೀ ಗಾತ್ರದ ಉಂಡೆಯೊಂದು ಆಕೆಯ ಹೊಟ್ಟೆಯಲ್ಲಿ ಕಾಣಿಸಿಕೊಂಡಿತ್ತು. ಹೀಗಾಗಿ ಆಕೆಗೆ ಕೂಡಲೇ ಶಸ್ತ್ರಚಿಕಿತ್ಸೆ ನಡೆಸಲು ಸಲಹೆ ನೀಡಿದರು.

ನಂತರ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಆಕೆಯ ಹೊಟ್ಟೆಯಿಂದ ದೊಡ್ಡ ಗಾತ್ರದ ಕೂದಲಿನ ಉಂಡೆ ಹೊರತೆಗೆದಿದ್ದಾರೆ.

ಇಷ್ಟಕ್ಕೂ ಅಷ್ಟು ಪ್ರಮಾಣದ ಕೂದಲು ಹೊಟ್ಟೆ ಸೇರಿದ್ದು ಹೇಗೆ?
ಆ ಬಾಲಕಿಗೆ ತನ್ನ ಕೂದಲನ್ನು ಕಿತ್ತು ತಿನ್ನುವ ವಿಚಿತ್ರವಾದ ಅಭ್ಯಾಸ ಹಲವು ವರ್ಷಗಳಿಂದ ಇತ್ತು. ಹೀಗಾಗಿ ಕ್ರಮೇಣ ಆಕೆಗೆ ಊಟ ಮಾಡಿದ ಕೂಡಲೇ ವಾಂತಿಯಾಗಲು ಶುರುವಾಯಿತು.

Loading...
loading...
error: Content is protected !!