ಎನ್ಕೌಂಟರಿನಲ್ಲಿ ಒಬ್ಬ ಉಗ್ರನ ಹತ್ಯೆ

ಶ್ರೀನಗರ: ಜಮ್ಮು ಕಾಶ್ಮೀರದ ಸೋಪಿಯನ್ ಜಿಲ್ಲೆಯ ದೊಬ್ಜಾನ್ ಗ್ರಾಮದಲ್ಲಿ ಶನಿವಾರ ನಡೆದ ಎನ್ಕೌಂಟರ್ ನಲ್ಲಿ ಭದ್ರತಾ ಪಡೆಗಳು ಒಬ್ಬ ಉಗ್ರನನ್ನು ಹತ್ಯೆ ಮಾಡಿದ್ದಾರೆ. ಎನ್ಕೌಂಟರ್ ವೇಳೆ ಯೋಧರೊಬ್ಬರು ಗಾಯಗೊಂಡಿದ್ದು, ಕೂಡಲೇ ಅತನನ್ನು ಅಸ್ಪತ್ರೆಗೆ ದಾಖಲಿಸಿದ್ದೇವೆ, ಈಗ ಯೋಧನ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವ್ಯಾಸ ರಚಿತ ಮಹಾಭಾರತ

ಎನ್ಕೌಂಟರ್ ನಡೆದ ಪ್ರದೇಶದಲ್ಲಿ ಕನಿಷ್ಟ ಇಬ್ಬರು ಉಗ್ರರಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಪೊಲೀಸರೊಂದಿಗೆ ಸೇರಿ ಸೇನೆ ಶುಕ್ರವಾರ ಜಂಟಿ ಕಾರ್ಯಚರಣೆ ಆರಂಭಿಸಿತ್ತು. ರಾತ್ರಿ ಉಗ್ರರು ಪೊಲೀಸರ ಮೇಲೆ ದಾಳಿ ನಡೆಸಿದರು. ನಂತರ ಉಗ್ರರಿಗಾಗಿ ಶೋಧ ನಡೆಸುತ್ತಿದ್ದ ವೇಳೆ ಎನ್ಕೌಂಟರ್ ನಡೆದಿದೆ.

Related Post

error: Content is protected !!