ಐಸಿಸ್ ಉಗ್ರ ಸಂಘಟನೆ ಸೇರಿದ್ದ ಕೇರಳದ ಮತ್ತೊಂದು ವಿಕೆಟ್ ಪತನ

ಇಸ್ಲಾಮಿಕ್ ಸ್ಟೇಟ್ಸ್ ಉಗ್ರ ಸಂಘಟನೆಗೆ ಸೇರಿದ್ದಾನೆನ್ನಲಾದ ಯುವಕನೊಬ್ಬ ಅಫ್ಘನಿಸ್ತಾನದಲ್ಲಿ ಹತ್ಯೆಯಾಗಿದ್ದಾನೆ. ಕಳೆದ ಜೂನ್ ನಲ್ಲಿ ನಾಪತ್ತೆಯಾಗಿ ನಂತರ ಇಸ್ಲಾಮಿಕ್ ಸ್ಟೇಟ್ಸ್ ಉಗ್ರ ಸಂಘಟನೆ ಸೇರಿದ್ದಾರೆನ್ನಲಾದ 21 ಜನರ ಪೈಕಿ ಈಗ ಹತನಾಗಿರುವ ಶಾಜೀರ್(32) ಕೂಡಾ ಒಬ್ಬ. ಮಜೀದ್ ಹತ್ಯೆಯಾಗಿರುವುದಾಗಿ ಉಗ್ರ ಸಂಘಟನೆ ಸೇರಿದ್ದ ಮತ್ತೊಬ್ಬ ವ್ಯಕ್ತಿ ಅಶ್ಫಾಕ್ ಮಜೀದ್ ಎಂಬುವವನಿಂದ ಮಾಹಿತಿ ಬಂದಿದೆ ಎನ್ನಲಾಗಿದೆ.

ಕೇರಳದ ಲೇಖಕ ಬಿ.ಸಿ.ರೆಹಮಾನ್ ಗೆ ಟೆಲಿಗ್ರಾಮ್ ಮೊಬೈಲ್ ಆಪ್ ಮೂಲಕ ಸಂದೇಶ ಕಳುಹಿಸಿರುವ ಅಶ್ಫಾಕ್ ಮಜೀದ್, ಅಫ್ಘನಿಸ್ತಾನದಲ್ಲಿ ನಡೆದ ದಾಳಿಯಲ್ಲಿ ಶಾಜೀರ್ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾನೆ. ಇದರಿಂದಾಗಿ ಕಳೆದ ಜೂನ್ ನಲ್ಲಿ ರಾಜ್ಯದಿಂದ ನಾಪತ್ತೆಯಾಗಿ ಐಎಸ್ಐಎಸ್ ಭಯೋತ್ಪಾದಕ ಸಂಘಟನೆ ಸೇರಿದ್ದ 21 ರಲ್ಲಿ ಒಟ್ಟು ನಾಲ್ವರು ಸತ್ತಂತಾಗಿದೆ. ಈ ಹಿಂದೆ ಇದೇ ರೀತಿ ಇತರೆ ಮೂವರ ಸಾವಿನ ಬಗ್ಗೆಯೂ ಮಾಹಿತಿ ಬಂದಿತ್ತು. ಆಗಲೂ ಇದೇ ಅಶ್ಫಾಕ್ ಮಾಹಿತಿ ರವಾನಿಸಿದ್ದ.

Loading...
error: Content is protected !!