ಪೊಲೀಸರ ಮೇಲೆ ಉಗ್ರರ ದಾಳಿ, ಒಬ್ಬ ಪೊಲೀಸ್ ಪೇದೆ ಸಾವು – News Mirchi
We are updating the website...

ಪೊಲೀಸರ ಮೇಲೆ ಉಗ್ರರ ದಾಳಿ, ಒಬ್ಬ ಪೊಲೀಸ್ ಪೇದೆ ಸಾವು

ಒಂದು ಕಡೆ ಜಮ್ಮೂ ಕಾಶ್ಮೀರದಲ್ಲಿ ಕೇಂದ್ರ ಸಚಿವರ ರಾಜನಾಥ್ ಸಿಂಗ್ ಪ್ರವಾಸ ಕೈಗೊಂಡಿದ್ದರೆ, ಮತ್ತೊಂದು ಕಡೆ ಅನಂತ್ ನಾಗ್ ಜಿಲ್ಲೆಯಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಶನಿವಾರ ಬಸ್ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಒಬ್ಬರು ಪೊಲೀಸ್ ಸಾವನ್ನಪ್ಪಿದ್ದು, ಇನ್ನಿಬ್ಬರು ಪೊಲೀಸರು ಗಾಯಗೊಂಡಿದ್ದಾರೆ.

ಶೋಪಿಯಾನ್ ಜಿಲ್ಲೆಯಲ್ಲಿ ಇಮಾಮ್ ಸಾಹಿಬ್ ಪ್ರದೇಶದಲ್ಲಿ ಸೇನಾ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳೂ, ಉಗ್ರರ ನಡುವೆ ಗುಂಡಿನ ಚಕಮಕಿ ಮುಂದುವರೆದಿದೆ.

ಇನ್ನು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಪ್ರವಾಸದ ಹಿನ್ನೆಲೆಯಲ್ಲಿ ಉಗ್ರರ ದಾಳಿ ಆತಂಕ ಸೃಷ್ಟಿಸಿದೆ. ರಾಜನಾಥ್ ಸಿಂಗ್ ನಾಲ್ಕು ದಿನಗಳ ಪ್ರವಾಸದ ಭಾಗವಾಗಿ ಶ್ರೀನಗರ ತಲುಪಿದ್ದಾರೆ. ಅವರೊಂದಿಗೆ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ರಾಜೀವ್ ಗುರಾ, ಸಚಿವಾಲಯದ ಹಿರಿಯ ಅಧಿಕಾರಿಗಳು ಕೂಡಾ ಪ್ರವಾಸದಲ್ಲಿದ್ದಾರೆ.

Contact for any Electrical Works across Bengaluru

Loading...
error: Content is protected !!