8 ಜಿಬಿ ರ್ಯಾಮ್, ಡ್ಯುಯಲ್ ಕ್ಯಾಮೆರಾ ಇರುವ ಒನ್ ಪ್ಲಸ್-5

ಕೆಲವು ತಿಂಗಳುಗಳಿಂದ ಹರಿದಾಡುತ್ತಿರುವ ಊಹಾಪೋಹದ ಸುದ್ದಿಗಳಿಗೆ ಕೊನೆಗೂ ತೆರೆಯೆಳೆದ ಚೀನಾ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿ “ಒನ್ ಪ್ಲಸ್”, ತನ್ನ ನೂತನ ಸ್ಮಾರ್ಟ್ ಫೋನ್ “ಒನ್ ಪ್ಲಸ್-5” ಬಿಡುಗಡೆ ಮಾಡಿದೆ. ಇದುವರೆಗೆ ಒನ್ ಪ್ಲಸ್ ನಿಂದ ಬಿಡುಗಡೆಯಾದ ಸ್ಮಾರ್ಟ್ ಫೋನ್ ಗಳಲ್ಲೇ ಇದು ಅತ್ಯಂತ ತೆಳುವಾದ 7.25 ಮಿ.ಮೀ. ಸ್ಮಾರ್ಟ್ ಫೋನ್ ಎಂದು ಕಂಪನಿ ಹೆಮ್ಮೆಯಿಂದ ಹೇಳಿಕೊಂಡಿದೆ.

ಒನ್ ಪ್ಲಸ್-5 ಎರಡು ಮಿಡ್ನೈಟ್ ಬ್ಲಾಕ್ ಮತ್ತು ಸ್ಲೇಟ್ ಗ್ರೇ ಕಲರ್ ಗಳಲ್ಲಿ ಲಭ್ಯವಿದೆ.
ಒನ್ ಪ್ಲಸ್-5 ಸ್ಮಾರ್ಟ್ ಫೋನ್ 5.5 ಇಂಚು ಪೂರ್ಣ ಎಚ್ಡಿ (1080 × 1920 ಪಿಕ್ಸೆಲ್ಗಳು) ಆಪ್ಟಿಕ್ ಅಮೋಲ್ಡ್ ಡಿಸ್ ಪ್ಲೇ ಹೊಂದಿದ್ದು, ಗೋರಿಲ್ಲಾ ಗ್ಲಾಸ್ ರಕ್ಷಣೆಯಿದೆ. ಆಂಡ್ರಾಯ್ಡ್ 7.1.1 ನೌಗಟ್ ಆಧಾರದ ಮೇಲೆ ಕಸ್ಟಮೈಸ್ ಮಾಡಲಾದ ಆಕ್ಸಿಜನ್ ಆಪರೇಟಿಂಗ್ ಸಿಸ್ಟಂ ಹೊಂದಿದೆ. ಕ್ವಾಲ್ಕಾಮ್ ಸ್ನಾಪ್ ಡ್ರಾಗನ್ 835 ಪ್ರೊಸೆಸರ್, 6 ಜಿಬಿ ರ್ಯಾಮ್/64 ಜಿಬಿ ಇಂಟರ್ನಲ್ ಸ್ಟೋರೇಜ್ ಮತ್ತು 8 ಜಿಬಿ ರ್ಯಾಮ್/128 ಇಂಟರ್ನಲ್ ಸ್ಟೋರೇಜ್ ಗಳಲ್ಲಿ ಲಭ್ಯ.

ಕ್ಯಾಮೆರಾ ವಿಷಯಕ್ಕೆ ಬಂದರೆ 1 ಮೈಕ್ರಾನ್ ಪಿಕ್ಸೆಲ್ ಸೋನಿ IMX371 ಸೆನ್ಸಾರ್ ಹೊಂದಿರುವ 16 ಮೆಗಾ ಪಿಕ್ಸೆಲ್ ಸೆಲ್ಫೀ ಕ್ಯಾಮೆರಾ ಇದೆ. ಹಿಂಬದಿ 16 ಮೆಗಾ ಪಿಕ್ಸೆಲ್ ಮತ್ತು 20 ಮೆಗಾ ಪಿಕ್ಸೆಲ್ ನ ಡ್ಯುಯಲ್ ಕ್ಯಾಮೆರಾಗಳಿವೆ. 3300 mAh ಬ್ಯಾಟರಿ ಸಾಮರ್ಥ್ಯವಿದ್ದು, ಈ ಹಿಂದಿನ ಒನ್ ಪ್ಲಸ್ 3ಟಿ ಗಿಂತ ಶೇ.20 ರಷ್ಟು ಹೆಚ್ಚು ಬ್ಯಾಟರಿ ಬಾಳಿಕೆ ಬರುತ್ತದೆ. 4ಜಿ ವೋಲ್ಟ್ ಎಲ್.ಟಿ.ಇ ಕನೆಕ್ಟಿವಿಟಿ ಹೊಂದಿದೆ.

ಅಮೆರಿಕದಲ್ಲಿ ಒನ್ ಪ್ಲಸ್-5 ಬೆಲೆ 479 ಡಾಲರ್ (ರೂ.31,000) ಗಳಿಂದ ಆರಂಭವಾಗುತ್ತದೆ. ಯೂರೋಪಿನಲ್ಲಿ 499 ಯೂರೋ (ರೂ.35,999) ರಿಂದ ಶುರುವಾಗುತ್ತದೆ. ಭಾರತದಲ್ಲಿ ಅಮೆಜಾನ್ ವೆಬ್ಸೈಟ್ ಮೂಲಕ ಜೂನ್ 22 ರ ಸಂಜೆ 4:30 ರಿಂದ ಆರ್ಡರ್ ಗಳನ್ನು ತೆಗೆದುಕೊಳ್ಳುತ್ತಾರೆ.