ಪ್ರವಾಹದಿಂದ ತಪ್ಪಿಸಿಕೊಳ್ಳಲು ಪ್ರತಿಪಕ್ಷಗಳೆಲ್ಲಾ ಒಂದೇ ಮರ ಹತ್ತಿ ಕೂತಿವೆ

ತೀರ್ಮಾನದಿಂದ ಉಂಟಾದ ಪ್ರವಾಹದಿಂದ ತಪ್ಪಿಸಿಕೊಳ್ಳಲು ಪ್ರತಿ ಪಕ್ಷಗಳೆಲ್ಲಾ ಒಂದೇ ಮರ ಹತ್ತಿ ಕೂತಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ವ್ಯಂಗ್ಯವಾಡಿದ್ದಾರೆ.

ಪ್ರವಾಹದ ಸಮಯದಲ್ಲಿ ಇಲಿಗಳು, ಬೆಕ್ಕುಗಳು, ಹಾವು, ಮುಂಗುಸಿಗಳು ಒಂದೇ ಮರ ಹತ್ತಿದಂತೆ ವರ್ತಿಸುತ್ತಿವೆ ಎಂದು ಹೇಳಿದರು. ಇದೇ ವೇಳೆ ದೇಶವನ್ನು ಬದಲಾಯಿಸಲು ಪ್ರಧಾನಿ ಮೋದಿಗೆ 15 ವರ್ಷಗಳ ಸಮಯ ನೀಡಬೇಕು ಎಂದು ಮನವಿ ಮಾಡಿದರು.

ಚಂಡೀಗಡ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರನ್ನು ಉದ್ದೇಶಿಸಿ ಭಾನುವಾರ ಮಾತನಾಡಿದ ಅವರು, ತೀರ್ಮಾನವನ್ನು ವಿರೋಧಿಸಿದ್ದರಲ್ಲಿ ನಮಗೆ ಆಶ್ಚರ್ಯವಿಲ್ಲ, ಕಾರಣ ಯುಪಿಎ ಸರ್ಕಾರ ಹಗರಣಗಳಿಗೆ ಪರ್ಯಾಯ ಪದವೆಂಬಂತೆ ಬದಲಾಗಿದೆ ಎಂದರು. ಶಸ್ತ್ರಚಿಕಿತ್ಸೆ ನಂತರ ಸ್ವಲ್ಪ ನೋವು ಭರಿಸುವುದು ಅನಿವಾರ್ಯ, ಉಳಿದ ಜೀವನವೆಲ್ಲಾ ಸಂತೋಷದಿಂದ ಕಳೆಯಬಹುದು ಎಂದರು.

Related News

loading...
error: Content is protected !!