ಓರಿಗಾಮಿ - ಕಾಗದದೊಂದಿಗಿನ ಕೈಚಳಕ |News Mirchi

ಓರಿಗಾಮಿ – ಕಾಗದದೊಂದಿಗಿನ ಕೈಚಳಕ

ಓರಿಗಾಮಿ ಪದವನ್ನು ಕೇಳಿದವರಿಗೆ ಈ ಪದವು ಉಗ್ರಗಾಮಿ, ತೀವ್ರಗಾಮಿ ಹಾಗೂ ಮಂದಗಾಮಿಗಳ ಸಹೋದರ ಪದಗಳೆಂಬಂತೆ ಕೇಳುಗರ ಮನದಲ್ಲಿ ಕುತೂಹಲ ಮೂಡುವಂತೆ ಮಾಡುವುದು ಸಹಜವೇ ಸರಿ. ಆದರೆ ಈ ಪದಕ್ಕೂ ಉಳಿದ ಪದಗಳಿಗೂ ಸಂಬಂಧವೇಯಿಲ್ಲ ಎಂದರೆ ನಿಮಗೆ ಆಶ್ಚರ್ಯವಾಗಬಹುದು.

ಕಾಗದದೊಂದಿಗಿನ ಕೈಬೆರಳುಗಳ ಕೈಚಳಕದಲ್ಲಿ ಮೂಡುವ ಸುಂದರ ಆಕೃತಿಗಳನ್ನು ಮಾಡುವ ಕಲೆಯೇ ಈ ಓರಿಗಾಮಿ.  ಓರಿ ಎಂದರೆ ಮಡಚುವುದು ಹಾಗೂ ಗಾಮಿ ಎಂದರೆ ಕಾಗದವೆಂದು ಜಪಾನಿ ಭಾಷೆಯಲ್ಲಿ ಕರೆಯುತ್ತಾರೆ. ಓರಿಗಾಮಿ ಕಲೆಯಲ್ಲಿ ಕಾಗದವನ್ನು ಕತ್ತರಿಸದೇ ಕೇವಲ ಮಡಿಚಿ ವಿವಿಧ ಬಗೆಯ ಆಕೃತಿಗಳನ್ನು ಮಾಡುತ್ತಾರೆ. ಇದೆ ಕಲೆಯ ಮತ್ತೊಂದು ಭಾಗವೆಂದರೆ ಕಿರಿಗಾಮಿ,ಈ  ಕಲೆಯಲ್ಲಿ ಕಾಗದವನ್ನು ಕತ್ತರಿಸಿ ವಿವಿಧ ಬಗೆಯ ಆಕೃತಿಗಳಿಗೆ ಜೀವ ತುಂಬುತ್ತಾರೆ.

ಕಾಗದವು ಸುಲಭವಾಗಿ ಸಿಗುವುದಲ್ಲದೇ, ಕಾಗದವನ್ನು ಬಳಸಿ ಆಕೃತಿಗಳನ್ನು ರಚಿಸಲು ಬಹಳ ಕಡಿಮೆ ವೆಚ್ಚ ತಗಲುವುದರಿಂದ ಓರಿಗಾಮಿ ಕಲೆಯೂ ಇಂದು ವಿಶ್ವದೆಲ್ಲಡೆ ತಲುಪಿದೆ. ಹೂವು , ಪ್ರಾಣಿ , ಪಕ್ಷಿ , ಕೀಟ, ಕಟ್ಟಡ, ಗಣಿತದ ಸೂತ್ರಗಳು, ವಿನ್ಯಾಸಗಳು , ಗೊಂಬೆ, ಆಟಿಕೆಗಳನ್ನು ಇನ್ನೂ ಹಲವಾರು ಆಕೃತಿಗಳನ್ನು ಓರಿಗಾಮಿ ಕಲೆಲ್ಲಿ ಸೃಷ್ಟಿಸಬಹುದು.

koifishಕಾಗದದ ತಯಾರಿಕೆಯನ್ನು ಚೀನಾ ದೇಶದವರು ಕ್ರಿಸ್ತಶಕ ೧೦೨ನೇ ವರ್ಷದಲ್ಲಿ  ಆರಂಭಿಸಿದರಾದರು, ಜಗತ್ತಿನ ಇತರರಿಗೆ ಕಾಗದದ ತಯಾರಿಕೆಯ ಬಗೆಯ ಗುಟ್ಟನ್ನು ಹಲವಾರು ಶತಮಾನಗಳ ಕಾಲ ಬಿಟ್ಟು ಕೊಡಲಲಿಲ್ಲ.ಹಾಗಾಗಿ ಕಾಗದದ ತಯಾರಿಕೆಯ ಗುಟ್ಟು ಚೀನಾದಲ್ಲೇ ಹಲವಾರು ವರ್ಷಗಳ ಕಾಲ ಅವರೆಲ್ಲೆ ಉಳಿಯಿತು. ಕಡೆಗೆ ಚೀನಾ ದೇಶದ ಬೌದ್ದ ಬಿಕ್ಕುಗಳು ಕಾಗದ ತಯಾರಿಕೆಯ ಕಲೆಯ ಗುಟ್ಟನ್ನು ಕೊರಿಯ ಹಾಗೂ ಜಪಾನ್ ದೇಶಗಳಿಗೆ ತಿಳಿಸಿಕೊಟ್ಟರು. ಕಾಗದದ ತಯಾರಿಕೆಯ ಗುಟ್ಟು ಜಪಾನ್ ದೇಶದಲ್ಲಿ ಧಾರ್ಮಿಕ ಕ್ರಾಂತಿಯೊಂದಿಗೆ ಓರಿಗಾಮಿ ಕಲೆಯನ್ನು ಸಹ ಜಗತ್ತಿಗೆ ಪರಿಚಯಿಸಿತು. ಆರಂಭದಲ್ಲಿ ಈ ಕಲೆಯನ್ನು ಜಪಾನ್ ದೇಶದ ಬಿಕ್ಕುಗಳು ಧಾರ್ಮಿಕ ಕಾರ್ಯಕ್ಕೆ ಬಳಸುತ್ತಿದ್ದರು, ಇದು ಮುಂದುವರಿದು ಬೇರೆ ಎಲ್ಲ ಸಂದರ್ಭಗಳಲ್ಲಿ ಸಾಮಾನ್ಯ ಜನರು ಬಳಸಲಾರಂಭಿಸಿದರು.
origami-paper-art-142ಒಂದು ಕಾಲದಲ್ಲಿ ಈ ಕಲೆಯನ್ನು ಜಪಾನ್ ದೇಶದ ಶಾಲೆಗಳಲ್ಲಿ ಹೇಳಿಕೊಡುತ್ತಿದ್ದರು ಆದರೆ ಈಗ ಮನೆಯಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಓರಿಗಾಮಿ ಕಲೆಯ ಜ್ಞಾನವನ್ನು ಮುಂದಿನ ಪೀಳಿಗೆಯ ಜೊತೆಗೆ ಹಂಚಿಕೊಳ್ಳುತ್ತಿದ್ದಾರೆ ಇದರೊಂದಿಗೆ ಕಲೆಯನ್ನು ಜೀವಂತವಾಗಿಟ್ಟಿದ್ದಾರೆ.  ಕ್ರೇನ್(CRANE) ಈ ಮಾದರಿಯ ಓರಿಗಾಮಿ ಆಕೃತಿಯು ಜಪಾನ್ ದೇಶದಲ್ಲಿ ಅತ್ಯಂತ ಹೆಸರುವಾಸಿಯಾದದು ಇದರ ಹಿನ್ನಲೆಯು ಸಹ ಅತ್ಯಂತ ಕುತೂಹಲವಾಗಿದೆ.
imagesಆಗಸ್ಟ್ ೬ ೧೯೪೫ರಂದು ಅಮೇರಿಕ ದೇಶವು ಜಪಾನ್ ದೇಶದ ಹೀರೋಷಿಮ ನಗರದ ಅಣುಬಾಂಬ್ ಹಾಕಿದಾಗ ಇಡೀ ನಗರವೇ ಕ್ಷಣಮಾತ್ರದಲ್ಲಿ ಭಸ್ಮವಾಗಿ ಹೋಗಿತ್ತು. ಅಳಿದುಳಿದವರಲ್ಲಿ  ಸಡಕು ಸಾಸಕಿ ಎಂಬ ಎರಡು ವರ್ಷದ ಪುಟ್ಟ ಮಗುವು ಸಹ  ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದಿತ್ತು. ಅಣು ಬಾಂಬಿನ ವಿಕಿರಣದ ಪರಿಣಾಮ ಸಾಸಕಿಗೆ ೧೨ ವರ್ಷವಾದಗ ಕಾನ್ಸರ್ ರೋಗಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಒಂದು ಸಾವಿರ ಕ್ರೇನ್ ಆಕೃತಿಗಳನ್ನು ಮಾಡಿದರೆ ನಮ್ಮ ಆಸೆ ನೇರವೆರುತ್ತದೆ ಎಂದು ಜಪಾನಿನ ನಾಣ್ಣುಡಿ ಹೇಳುತ್ತದೆ ಎಂದು ಅರಿತ ಸಾಸಕಿ ೬೪೪ ಕ್ರೇನ್ ಆಕೃತಿಗಳನ್ನು ಮಾಡುವಷ್ಟರಲ್ಲಿ ರೋಗವು ಅಂತಿಮ ಹಂತವನ್ನು ತಲುಪಿ ಅವಳು ಅಸುನೀಗುತ್ತಾಳೆ. ಅವಳ ಆಸೆ ಕಾನ್ಸರ್  ರೋಗದಿಂದ ಗುಣಮುಖವಾಗುವುದಷ್ಟೇ ಆಗಿರುತ್ತದೆ. ಕಡೆಗೆ ಸಾಸಕಿ ಮನೆಯವರು ಹಾಗೂ ಮಿತ್ರರೆಲ್ಲಾ ಸೇರಿ ಉಳಿದ ಆಕೃತಿಗಳನ್ನು ಮಾಡಿ ಅವಳ ಆಸೆಯನ್ನು ಈಡೇರಿಸುತ್ತಾರೆ.

೧೯೮೩ರಲ್ಲಿ ಟಿ ಸುಂದರ ರಾವ್ ಅವರು ಭಾರತದಲ್ಲಿ ಓರಿಗಾಮಿ ಕಲೆಯನ್ನು ಪರಿಚಯಿಸುತ್ತಾರೆ, ಇವರು ರಚಿಸಿದ ‘ ಜಿಯೋಮೆಟ್ರಿಕ್ ಎಕ್ಸರ್ಸೈಸ್ ಇನ್ ಪೇಪರ್ ಫೋಲ್ಡಿಂಗ್’ ‘ ಎಂಬ ಪುಸ್ತಕ  ವಿಶ್ವ Madhu chandraಮಾನ್ಯತೆಯನ್ನು ಪಡೆದಿದೆಯಲ್ಲದೆ ಇಂದಿನವರೆಗೆ ಹಲವಾರು ಮರು ಮುದ್ರಣಗಳನ್ನು ಕಂಡಿದೆಯೆಂದರೆ ಇವರ ಜನಪ್ರಿಯತೆಯನ್ನು ಸಾರಿ ಹೇಳುತ್ತದೆ.

– ಮಧು ಚಂದ್ರ

Loading...
loading...
error: Content is protected !!