ನಮ್ಮ ಮುಸ್ಲಿಂ ಸಹೋದರಿಯರಿಗೂ ನ್ಯಾಯ ಸಿಗಬೇಕು – News Mirchi

ನಮ್ಮ ಮುಸ್ಲಿಂ ಸಹೋದರಿಯರಿಗೂ ನ್ಯಾಯ ಸಿಗಬೇಕು

ತ್ರಿವಳಿ ತಲಾಖ್ ಪದ್ದತಿಯನ್ನು ಒಂದು ಕೆಟ್ಟ ಸಾಮಾಜಿಕ ಪಿಡುಗು ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ಇಂತಹ ಪದ್ದತಿಗಳಿಗೆ ಸಾಮಾಜಿಕ ಜಾಗೃತಿಯಿಂದ ಅಂತ್ಯ ಹಾಡಬಹುದು ಎಂದ ಅವರು, ಈ ವಿಷಯದಲ್ಲಿ ಮುಸ್ಲಿಂ ಸಮುದಾಯದಲ್ಲಿ ಸಂಘರ್ಷ ಉಂಟಾಗುವುದನ್ನು ಬಿಜೆಪಿ ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಮಾಜದಲ್ಲಿ ಇಂತಹ ಪಿಡುಗುಗಳಿದ್ದರೆ ನಾವು ಸಮಾಜದಲ್ಲಿ ಅರಿವು ಮೂಡಿಸಿ ಅವರಿಗೆ ನ್ಯಾಯ ಕೊಡಿಸಲು ಶ್ರಮಿಸಬೇಕು ಎಂದರು. ಭಾನುವಾರ ಇಲ್ಲಿ ನಡೆದ 2 ದಿನಗಳ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಾಮಾಜಿಕ ನ್ಯಾಯಯದ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಮುಸ್ಲಿಂ ಸಹೋದರಿಯರಿಗೂ ನ್ಯಾಯ ಸಿಗಬೇಕು. ಅವರಿಗೆ ಅನ್ಯಾವಾಗಬಾರದು ಎಂದು ಮೋದಿಯವರು ಹೇಳಿದರು.

Loading...