ಸೇನಾ ಮುಖ್ಯಸ್ಥರನ್ನು ಬೀದಿ ರೌಡಿ ಎಂದ ಕಾಂಗ್ರೆಸ್ ಮುಖಂಡ |News Mirchi

ಸೇನಾ ಮುಖ್ಯಸ್ಥರನ್ನು ಬೀದಿ ರೌಡಿ ಎಂದ ಕಾಂಗ್ರೆಸ್ ಮುಖಂಡ

ನವದೆಹಲಿ: ಕಾಂಗ್ರೆಸ್ ಪಕ್ಷದ ಮುಖಂಡ, ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಪುತ್ರ ಸಂದೀಪ್ ದೀಕ್ಷಿತ್ ಭಾರತೀಯ ಸೇನಾ ಮುಖ್ಯಸ್ಥರ ವಿರುದ್ಧ ವಿವಾದಿತ ಹೇಳಿಕೆ ನೀಡಿದ್ದಾರೆ. ಸಂದೀಪ್ ದೀಕ್ಷಿತ್ ಹೇಳಿಕೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆದರೆ ಸಂದೀಪ್ ದೀಕ್ಷಿತ್ ಹೇಳಿಕೆಯನ್ನು ಕಾಂಗ್ರೆಸ್ ಗಂಭೀರವಾಗಿ ತೆಗೆದುಕೊಳ್ಳದೆ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ.

ಮಾಫಿಯಾದಂತೆ ಎಚ್ಚರಿಸುತ್ತಿರುವ ಪಾಕಿಸ್ತಾನ ಸೇನೆ ಮತ್ತು ನಮ್ಮ ಸೇನೆಗೆ ವ್ಯತ್ಯಾಸವಿದೆ. ನಮ್ಮ ಸೇನಾ ಮುಖ್ಯಸ್ಥ (ಬಿಪಿನ್ ರಾವತ್) ಬೀದಿ ರೌಡಿಯಂತೆ ಮಾತನಾಡುತ್ತಿರುವುದು ಕೇಳಲು ಬೇಸರವಾಗುತ್ತಿದೆ ಎಂದು ಸಂದೀಪ್ ದೀಕ್ಷಿತ್ ಹೇಳಿದ್ದರು. ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ಸೇನಾ ಮುಖ್ಯಸ್ಥರನ್ನು ಬೀದಿ ರೌಡಿಗೆ ಹೋಲಿಕೆ ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

  • No items.

ಸೇನಾ ಮುಖ್ಯಸ್ಥರನ್ನು ಬೀದಿ ರೌಡಿ ಎನ್ನಲು ಕಾಂಗ್ರೆಸ್ ಪಕ್ಷಕ್ಕೆ ಎಷ್ಟು ಧೈರ್ಯ ಎಂದು ಕೇಂದ್ರ ಸಚಿವ ಕಿರಣ್ ರಿಜುಜು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಕ್ಷಮೆಯಾಚನೆ ಮಾಡಬೇಕು, ಸಂದೀಪ್ ದೀಕ್ಷಿತ್ ನನ್ನು ಪಕ್ಷದಿಂದ ಹೊರಹಾಕಬೇಕು ಎಂದು ಬಿಜೆಪಿಯ ಅಧಿಕೃತ ವಕ್ತಾರ ಸಂಬಿತ್ ಪಾತ್ರ ಒತ್ತಾಯಿಸಿದ್ದಾರೆ. ಆದರೆ ಕಾಂಗ್ರೆಸ್ ಮಾತ್ರ “ಈ ಹೇಳಿಕೆ ದುರದೃಷ್ಟಕರ” ಎಂದು ಸುಮ್ಮನಾಗಿದೆ. ಆದರೆ ತಮ್ಮ ಹೇಳಿಕೆ ವಿವಾದ ಸ್ವರೂಪ ಪಡೆದ ನಂತರ ಸಂದೀಪ್ ದೀಕ್ಷಿತ್ ಕ್ಷಮೆಯಾಚಿಸಿದ್ದಾರೆ.

Loading...
loading...
error: Content is protected !!