ಅಂಡಮಾನ್: 1200 ಪ್ರವಾಸಿಗರ ಸ್ಥಳಾಂತರ

***

​ಪೋರ್ಟ್ ಬ್ಲೇರ್: ಭಾರೀ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ 1200 ಕ್ಕೂ ಹೆಚ್ಚು ಪ್ರವಾಸಿಗರನ್ನು ಅಂಡಮಾನ್ ಮತ್ತು ನಿಕೋಬಾರ್ ನಲ್ಲಿನ ನೀಲ್ ಮತ್ತು ಹ್ಯಾವ್ಲಾಕ್ ದ್ವೀಪಗಳಿಂದ ರಕ್ಷಿಸಲಾಗಿದೆ.

ರಕ್ಷಣಾ ಕಾರ್ಯಚರಣೆಗಾಗಿ ಐದು ನೌಕಾಪಡೆಯ ಹಡಗುಗಳು, ಎರಡು ಕೋಸ್ಟ್ ಗಾರ್ಡ್ ಹಡಗುಗಳು ಮತ್ತು ಮೂರು ವಾಯುಸೇನೆಯ ಹೆಲಿಕಾಪ್ಟರ್ ಗಳನ್ನು ಬಳಸಿಕೊಳ್ಳಲಾಯಿತು.

ರಾತ್ರೋರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಜನರ ದೈನಂದಿನ ಜೀವನದ ಮೇಲೆ ಪ್ರಭಾವ ಬೀರಿ ಉತ್ತರ ಮತ್ತು ಮಧ್ಯ ನಿಕೋಬಾರ್ ಗಳಲ್ಲಿ ಪ್ರವಾಹದ ವಾತಾವರಣ ಸೃಷ್ಟಿಯಾಗಿತ್ತು. ತುಂಬಾ ಪ್ರಸಿದ್ಧ ಪ್ರವಾಸಿ ತಾಣಗಳಾದ ಹ್ಯಾವ್ಲಾಕ್ ಮತ್ತು ನೀಲ್ ದ್ವೀಪಗಳಲ್ಲಿ ಮಳೆಯಿಂದಾಗಿ ಹೆಚ್ಚು ತೊಂದರೆಯಾಗಿದೆ.