ಅಂಡಮಾನ್ ದ್ವೀಪಗಳಲ್ಲಿ ಸಿಲುಕಿದ 1400 ಪ್ರವಾಸಿಗರು

ಅಂಡಮಾನ್ ನಿಕೋಬಾರ್ ನ ಹ್ಯಾವ್‌ಲಾಕ್, ನೀಲ್ ದ್ವೀಪಗಳಲ್ಲಿ ಭಾರಿ ಮಳೆ, ಪ್ರವಾಹಗಳಲ್ಲಿ ಸಿಲುಕಿದ ಸುಮಾರು‌ 1400 ಜನ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಅಲ್ಲಿರುವ ಪ್ರತಿಯೊಬ್ಬರನ್ನೂ ಸುರಕ್ಷಿತವಾಗಿ ಕರೆತರಲು ಪ್ರಯತ್ನಗಳು ಅರಂಭವಾಗಿವೆ, ಪ್ರವಾಸಿಗರ ಕುಟುಂಬ ಸದಸ್ಯರು ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು. ಪ್ರವಾಹದ ತೀವ್ರತೆ ಕಡಿಮೆಯಾಗುತ್ತಿದ್ದಂತೆ ರಕ್ಷಣಾ ಕಾರ್ಯಗಳು ಆರಂಭವಾಗುತ್ತವೆ, ಈಗಾಗಲೇ ತಂಡಗಳು ಪೋರ್ಟ್ ಬ್ಲೇರ್ ನಲ್ಲಿ ಸಿದ್ಧವಾಗಿವೆ ಎಂದು ಹೇಳಿದರು.

ದ್ವೀಪದಲ್ಲಿ ಸಿಲುಕಿದವರನ್ನು ಸುರಕ್ಷಿತವಾಗಿ ಕರೆತರಲು ನೌಕಾಪಡೆಯ ಹಲವು ನೌಕೆಗಳನ್ನು ಅಲ್ಲಿಗೆ ಕಳುಹಿಸಲಾಗಿದೆಯಾದರೂ, ವಾತಾವರಣ ಅನುಕೂಲವಾಗಿಲ್ಲದ ಕಾರಣ ಅವು ಅಲ್ಲಿ ಲಂಗರು ಹಾಕಲು ಸಾಧ್ಯವಾಗಿಲ್ಲ. ಐದು ಮೀಟರ್ ಎತ್ತರಕ್ಕೆ ಅಲೆಗಳು ಅಪ್ಪಳಿಸುತ್ತಿರುವುದರಿಂದ ಪ್ರಯಾಣಿಕರನ್ನು ನೌಕೆಗಳಿಗೆ ಹತ್ತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನೌಕೆಗಳು ಪೋರ್ಟ್ ಹೊರಗಿನಿಂದ ಕಾಯುತ್ತಿದ್ದು, ಅವುಗಳಲ್ಲಿ ಸಾಕಷ್ಟು ಆಹಾರ, ಕುಡಿಯುವ ನೀರು, ಔಷಧಿಗಳು, ವೈದ್ಯಕೀಯ ಸಿಬ್ಬಂದಿ ಎಲ್ಲಾ ಸಿದ್ಧರಾಗಿದ್ದಾರೆ ಎಂದು ರಕ್ಷಣಾ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪೋರ್ಟ್ ಬ್ಲೇರ್ ಗೆ 40 ಕಿ.ಮೀ ದೂರದ ಈ ಪ್ರದೇಶ ಪ್ರವಾಹ ಪೀಡಿತವಾಗಿದೆ.

Loading...

Leave a Reply

Your email address will not be published.

error: Content is protected !!