ಮಹಾಶಿವರಾತ್ರಿ ಪ್ರಸಾದ ತಿಂದು 1500ಕ್ಕೂ ಹೆಚ್ಚು ಜನ ಅಸ್ವಸ್ಥ

ಭೂಪಾಲ್: ಮಹಾಶಿವರಾತ್ರಿ ಪ್ರಸಾದ ತಿಂದು 1500 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿರುವ ಘಟನೆ ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ನಡೆದಿದೆ.

ಮಧ್ಯಪ್ರದೇಶದ ಬರ್ವಾನ್ ಜಿಲ್ಲೆಯಲ್ಲಿನ ಆಶ್ರಮವೊಂದರಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆದಿತ್ತು. ಇದನ್ನು ಸೇವಿಸಿದ ಭಕ್ತರಿಗೆ ಹೊಟ್ಟೆ ನೋವು ಮತ್ತು ವಾಂತಿ ಕಾಣಿಸಿಕೊಂಡಿತ್ತು. ನಂತರ ಪಡೆಗಳನ್ನು ಬಳಸಿಕೊಂಡು ಅಸ್ವಸ್ಥರನ್ನು ಗುರುತಿಸಿ ಜಿಲ್ಲಾಸ್ಪತ್ರೆ ಮತ್ತು ಎರಡು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಯಿತು. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Get Latest updates on WhatsApp. Send ‘Subscribe’ to 8550851559