ಪಾಕ್ ನಮ್ಮ ಐರನ್ ಬ್ರದರ್ ಎಂದ ಚೀನಾ… – News Mirchi

ಪಾಕ್ ನಮ್ಮ ಐರನ್ ಬ್ರದರ್ ಎಂದ ಚೀನಾ…

ಪಾಕಿಸ್ತಾನದಲ್ಲಿ ಇತ್ತೀಚೆಗೆ ಚೀನಾದ ಇಬ್ಬರು ಶಿಕ್ಷಕರ ಹತ್ಯೆ ನಡೆದಿದ್ದು, ಆ ಹತ್ಯೆಯಲ್ಲಿ ಪಾಕಿಸ್ತಾನದ ಪಾತ್ರವಿಲ್ಲ ಎಂದು ಚೀನಾ ಹೇಳಿದೆ. ಮತ್ತೊಂದು ಕಡೆ ಚೀನಾದ ಸರ್ಕಾರ ಸ್ವಾಮ್ಯದ ‘ಗ್ಲೋಬಲ್ ಟೈಮ್ಸ್’ ಪಾಕಿಸ್ತಾನವನ್ನು “ಐರನ್ ಬ್ರದರ್” ಎಂದು ಹೊಗಳಿ ಅಟ್ಟಕ್ಕೇರಿಸಿದೆ. ಬಲೂಚಿಸ್ತಾನದಲ್ಲಿ ಇಬ್ಬರು ಚೀನಾದ ಶಿಕ್ಷಕರ ಹತ್ಯೆಗೆ ಕಾರಣ ದಕ್ಷಿಣ ಕೊರಿಯಾದ ಕ್ರೈಸ್ತ ಮಿಷನರಿ ಎಂದು ಪತ್ರಿಕೆ ಆರೋಪಿಸಿದೆ. ಈ ಘಟನೆ ಕುರಿತು ಪಾಕಿಸ್ತಾನವನ್ನು ದೂಷಿಸಬೇಕಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲದೆ ಚೀನಾ – ಪಾಕಿಸ್ತಾನ ಸಂಬಂಧಗಳ ಮೇಲೆ ಈ ಶಿಕ್ಷಕರ ಹತ್ಯೆ ಪ್ರಭಾವ ಬೀರಲಿದೆ ಎಂದು ಭಾರತದ ಮಾಧ್ಯಮಗಳು ಅತಿಯಾಗಿ ಪ್ರಚಾರ ನೀಡುತ್ತಿವೆ ಎಂದು ಭಾರತೀಯ ಮಾಧ್ಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಪಾಕಿಸ್ತಾನ ಸೋಮವಾರ ನೀಡಿದ ಪ್ರಕಟಣೆಯಲ್ಲಿ, ಹತ್ಯೆಯಾದ ಇಬ್ಬರು ಚೀನೀ ಶಿಕ್ಷಕರು ದಕ್ಷಿಣ ಕೊರಿಯಾದ ಕ್ರೈಸ್ತ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಿದೆ. ಚೀನಾ ವಿದೇಶಾಂಗ ಸಚಿವಾಲಯದ ಅಧಿಕೃತ ಪ್ರತಿನಿಧಿ ಮಾತನಾಡಿ “ಕಳೆದ ವಾರ ಆಸ್ಥಾನಾದಲ್ಲಿ ನಡೆದಿ ಶೃಂಗಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿಯೊಂದಿಗೆ ಚೀನಾ ಅಧ್ಯಕ್ಷರು ಮಾತನಾಡಲಿಲ್ಲವೆಂದು ನಡೆಯುತ್ತಿರುವ ಪ್ರಚಾರ ನಿರಾಧಾರ” ಎಂದು ಹೇಳಿದ್ದಾರೆ.

Contact for any Electrical Works across Bengaluru

Loading...
error: Content is protected !!