ನವಾಜ್ ಷರೀಫ್ ಗೆ ಶಿಕ್ಷೆಯಾದರೆ, ಅವರ ತಮ್ಮನೇ ಪ್ರಧಾನಿ? – News Mirchi

ನವಾಜ್ ಷರೀಫ್ ಗೆ ಶಿಕ್ಷೆಯಾದರೆ, ಅವರ ತಮ್ಮನೇ ಪ್ರಧಾನಿ?

ಪನಾಮಾ ಪೇಪರ್ಸ್ ಲೀಕ್ ಪ್ರಕರಣದಲ್ಲಿ ಭ್ರಷ್ಟಾಚಾರ ಮತ್ತು ಮನಿ ಲಾಂಡರಿಂಗ್ ಆರೋಪ ಎದುರಿಸುತ್ತಿರುವ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಗೆ ಶಿಕ್ಷೆಯಾದರೆ, ಮುಂದಿನ ಪ್ರಧಾನಿ ಯಾರು ಎಂಬ ಪ್ರಶ್ನೆ ಹರಿದಾಡುತ್ತಿದೆ. ಮೂಲಗಳ ಪ್ರಕಾರ ನವಾಜ್ ಷರೀಫ್ ಗೆ ನ್ಯಾಯಾಲಯದಲ್ಲಿ ಶಿಕ್ಷೆಯಾದರೆ ಅವರ ತಮ್ಮ ಹಾಗೂ ಪಂಜಾಬ್ ರಾಜ್ಯ ಮುಖ್ಯಮಂತ್ರಿಯಾಗಿರುವ ಶಹ್ಬಾಜ್ ಷರೀಫ್ ಮುಂದಿನ ಪ್ರಧಾನಿಯಾಗಲಿದ್ದಾರೆ ಎನ್ನಲಾಗುತ್ತಿದೆ.

ಪಾಕ್ ಗೆ ಅಮೆರಿಕ ನೀಡಿದ ಶಾಕ್…

ಆದರೆ ಶಹಬಾಜ್ ಸಂಸತ್ತಿಗೆ ಆಯ್ಕೆಯಾಗಿಲ್ಲವಾದ್ದರಿಂದ ಅವರು ಸಂಸತ್ತಿಗೆ ಆಯ್ಕೆಯಾಗಿ ಬರುವವರೆಗೂ ಮಧ್ಯಂತರ ಪ್ರಧಾನಿಯಾಗಿ ರಕ್ಷಣಾ ಸಚಿವ ಖವಾಜಾ ಆಸಿಫ್ 45 ದಿನಗಳ ಮಟ್ಟಿಗೆ ಪ್ರಧಾನಿಯಾಗುವ ಸಾಧ್ಯತೆಗಳಿವೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

ಈಗಾಗಲೇ ಪ್ರಧಾನಿ ನವಾಜ್ ಷರೀಫ್ ವಿರುದ್ಧದ ಪನಾಮಾ ಪೇಪರ್ಸ್ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಶುಕ್ರವಾರ ಅಲ್ಲಿನ ಸುಪ್ರೀಂ ಕೋರ್ಟ್ ಮುಗಿಸಿದ್ದು, ತೀರ್ಪು ಕಾಯ್ದಿರಿಸಿದೆ.

Contact for any Electrical Works across Bengaluru

Loading...
error: Content is protected !!