ಪಾಕ್ ನಿಂದ ಕದನವಿರಾಮ ಉಲ್ಲಂಘನೆ, ಬಾಲಕಿ ಮತ್ತು ಒಬ್ಬ ಯೋಧನ ಸಾವು

***

ಕದನ ವಿರಾಮ ಉಲ್ಲಂಘಿಸಿ ಸೋಮವಾರ ಭಾರತೀಯ ಸೇನಾ ಪೋಸ್ಟ್ ಗಳತ್ತ ಪಾಕ್ ನಡೆಸಿದ ದಾಳಿಯಲ್ಲಿ 6 ವರ್ಷ ಬಾಲಕಿ ಮತ್ತು ಭಾರತೀಯ ಯೋಧರೊಬ್ಬರು ಸಾವನ್ನಪ್ಪಿದ್ದು, ನಾಗರಿಕರೊಬ್ಬರು ಗಾಯಗೊಂಡಿದ್ದಾರೆ.

ಜಮ್ಮು ಕಾಶ್ಮೀರದ ರಾಜೌರಿ ಮತ್ತು ಪೂಂಛ್ ವಲಯಗಳಲ್ಲಿನ ಗ್ರಾಮಗಳು ಮತ್ತು ಸೇನಾ ಪೋಸ್ಟ್ ಗಳನ್ನು ಗುರಿಯಾಗಿಸಿ ಪಾಕ್ ಭಾರೀ ಶೆಲ್ ದಾಳಿ ನಡೆಸಿತ್ತು. ಇತ್ತ ಭಾರತೀಯ ಪಡೆಗಳೂ ತೀವ್ರ ಪ್ರತಿದಾಳಿ ನಡೆಸಿದ್ದಾರೆ.

ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆಗೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಡಿಜಿಎಂಒ ಹಂತದಲ್ಲಿ ಮಾತುಕತೆ ನಡೆಯಿತು. ಸಭೆಯಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ವಿವೇಚನಾರಹಿತವಾಗಿ ಗುಂಡಿನ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದ ಭಾರತ, ಸೂಕ್ತ ಪ್ರತಿದಾಳಿ ಮಾಡುವ ಹಕ್ಕು ಭಾರತಕ್ಕಿದೆ ಎಂದು ಹೇಳಿದೆ.