ಕುಲಭೂಷಣ್ ಜಾಧವ್ ವಿರುದ್ಧದ ಸಾಕ್ಷಿಗಳನ್ನು ವಿಶ್ಲೇಷಿಸುತ್ತಿದ್ದೇವೆ: ಪಾಕ್ – News Mirchi

ಕುಲಭೂಷಣ್ ಜಾಧವ್ ವಿರುದ್ಧದ ಸಾಕ್ಷಿಗಳನ್ನು ವಿಶ್ಲೇಷಿಸುತ್ತಿದ್ದೇವೆ: ಪಾಕ್

ಪಾಕಿಸ್ತಾನ ಮಿಲಿಟರಿ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಕುಲಭೂಷಣ್ ಜಾಧವ್ ಅವರ ವಿರುದ್ಧವಿರುವ ಸಾಕ್ಷಿಗಳನ್ನು ವಿಶ್ಲೇಷಿಸುತ್ತಿದ್ದು, ನಂತರ ಜಾಧವ್ ಸಲ್ಲಿಸಿರುವ ಕ್ಷಮಾದಾನದ ಅರ್ಜಿ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪಾಕಿಸ್ತಾನ ಆರ್ಮಿ ಚೀಫ್ ಜನರಲ್ ಕಮರ್ ಜಾವೇದ್ ಬಜ್ವಾ ಹೇಳಿದ್ದಾರೆ.

ಸೇನಾ ಮೇಲ್ಮನವಿ ನ್ಯಾಯಾಲಯ ಕುಲಭೂಷಣ್ ಜಾಧವ್ ಮನವಿಯನ್ನು ತಿರಸ್ಕರಿಸಿದ ಬಳಿಕ, ಕಳೆದ ತಿಂಗಳು ಸೇನಾ ಮುಖ್ಯಸ್ಥ ಬಜ್ವಾ ಅವರಿಗೆ ಕ್ಷಮಾದಾನ ನೀಡುವಂತೆ ಕುಲಭೂಷಣ್ ಜಾಧವ್ ಮನವಿ ಮಾಡಿದ್ದರು ಎನ್ನಲಾಗಿದೆ.

ಜಾಧವ್ ವಿರುದ್ಧದ ಸಾಕ್ಷಿಗಳನ್ನು ಆರ್ಮಿ ಚೀಫ್ ಜನರಲ್ ವಿಶ್ಲೇಷಿಸುತ್ತಿದ್ದು, ಅರ್ಹತೆಯ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಪಾಕ್ ಸೇನಾ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ಹೇಳಿದ್ದಾರೆ.

ರಾಷ್ಟ್ರಪತಿ ಅಭ್ಯರ್ಥಿಗೆ ಬೆಂಬಲ: ಅಪ್ಪ ಮಕ್ಕಳ ವಿಭಿನ್ನ ನಿಲುವು?

ಏಪ್ರಿಲ್ ನಲ್ಲಿ ಬೇಹುಗಾರಿಕೆ ಮತ್ತು ಉಗ್ರ ಚಟುವಟಿಕೆಗಳ ಆರೋಪದ ಮೇಲೆ ಕುಲಭೂಷಣ್ ಜಾಧವ್ ಅವರಿಗೆ ಪಾಕ್ ಮಿಲಿಟರ್ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು. ಆದರೆ ಭಾರತದ ಮನವಿಯನ್ನು ಪುರಸ್ಕರಿಸಿದ ಹೇಗ್ ನಲ್ಲಿನ ಅಂತರಾಷ್ಟ್ರೀಯ ನ್ಯಾಯಾಲಯ ಶಿಕ್ಷೆ ಜಾರಿಯಾಗದಂತೆ ತಡೆ ನೀಡಿತ್ತು.

ಗೋರಕ್ಷಣೆ ಹೆಸರಿನಲ್ಲಿ ಹಿಂಸೆಗಿಳಿದರೆ ಕಠಿಣ ಕ್ರಮ ಕೈಗೊಳ್ಳಿ: ಮೋದಿ

ಜಾಧವ್ ಅವರನ್ನು ಇರಾನ್ ನಿಂದ ಬಲೂಚಿಸ್ತಾನದಲ್ಲಿ ಬಂದಿಳಿಯುತ್ತಿದ್ದಂತೆ ಕಳೆದ ವರ್ಷ ಮಾರ್ಚ್ 31 ರಂದು ಬಂಧಿಸಿದ್ದೇವೆ ಎಂದು ಪಾಕ್ ಹೇಳುತ್ತಿದೆ. ಆದರೆ ಭಾರತೀಯ ನೌಕಾಪಡೆಯಿಂದ ನಿವೃತ್ತರಾಗಿ, ಇರಾನ್ ನಲ್ಲಿ ವ್ಯಾಪಾರ ನಡೆಸುತ್ತಿದ್ದ ಕುಲಭೂಷಣ್ ಜಾಧವ್ ಅವರನ್ನು ಇರಾನ್ ನಲ್ಲಿ ಪಾಕ್ ಅಪಹರಿಸಿ ಬಂಧಿಸಿದಂತೆ ನಾಟಕವಾಡುತ್ತಿದೆ ಎಂದು ಭಾರತ ವಾದಿಸುತ್ತಿದೆ.

Loading...