ಪಾಕ್ ಸೇನಾ ವಾಹನ ಗುರಿಯಾಗಿಸಿ ಸ್ಪೋಟ, 15 ಸಾವು

ಪಾಕಿಸ್ತಾನದ ಕ್ವೆಟ್ಟಾದಲ್ಲಿ ಶನಿವಾರ ನಡೆದ ಸ್ಪೋಟದಲ್ಲಿ 15 ಜನ ಸಾವನ್ನಪ್ಪಿದ್ದು, 32 ಜನ ಗಾಯಗೊಂಡಿದ್ದಾರೆ. ಸತ್ತವರಲ್ಲಿ ನಾಗರಿಕರು ಮತ್ತು 10 ಸೈನಿಕರೂ ಸೇರಿದ್ದಾರೆ. ಸೇನಾ ವಾಹನವನ್ನು ಗುರಿಯಾಗಿಸಿಕೊಂಡು ಈ ಸ್ಪೋಟ ನಡೆದಿದೆ. ಸ್ಪೋಟದ ಹಿನ್ನೆಲೆಯಲ್ಲಿ ನಗರದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಸ್ಪೋಟದ ಹೊಣೆಯನ್ನೂ ಇನ್ನೂ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.

ಕಳೆದ ಕೆಲ ತಿಂಗಳಲ್ಲಿ ಹಲವು ಇಂತದ್ದೇ ಇಲ್ಲಿ ಇಂತಹ ದಾಳಿಗಳು ನಡೆದಿದ್ದು, ಜೂನ್ ನಲ್ಲಿ ನಡೆದ ಬಾಂಬ್ ದಾಳಿಯಲ್ಲಿ 14 ಜನ ಸಾವನ್ನಪ್ಪಿದ್ದರು. ಪಾಕ್ ಸ್ವಾತಂತ್ರ್ಯ ದಿನಾಚರಣೆ(ಆಗಸ್ಟ್ 14)ಗೆ 2ದಿನ ಇರುವಂತೆ ಈ ದಾಳಿ ನಡೆದಿದೆ.

Loading...
error: Content is protected !!