ಮುಂಬೈ ದಾಳಿ ಸೂತ್ರಧಾರನಿಗೆ ಸಂಕಷ್ಟ

ಮುಂಬೈ ಸ್ಪೋಟದ ರೂವಾರಿ, ಜಮಾತೇ ಮುಖ್ಯಸ್ಥ ಹಫೀಜ್ ಸಯೀದ್ ಗೆ ಸಂಕಷ್ಟ ಎದುರಾಗುತ್ತಿದೆ. ದೇಶ ಬಿಟ್ಟು ಹೊರಹೋಗದಂತೆ ಆತನನ್ನು ಎಗ್ಸಿಟ್ ಕಂಟ್ರೋಲ್ ಪಟ್ಟಿಯಲ್ಲಿ ಪಾಕ್ ಸೇರಿಸಿದೆ. ಹಫೀಜ್ ಸೇರಿದಂತೆ ಆತನ ನಾಲ್ವರು ಪ್ರಮುಖ ಸಹಚರರನ್ನು ಕಳೆದ ಎರಡು ದಿನಗಳ ಹಿಂದೆ ಗೃಹಬಂಧನದಲ್ಲಿ ಇಟ್ಟಿದ್ದಾರೆ.

ಈಗಾಗಲೇ ಆಂತರಿಕ ವ್ಯವಹಾರಗಳ ಸಚಿವಾಲಯ ದೇಶದ ಎಲ್ಲಾ ರಾಜ್ಯಗಳ ಸರ್ಕಾರಗಳಿಗೆ ಆದೇಶ ಜಾರಿ ಮಾಡಿದೆ. ಎಗ್ಸಿಟ್ ಕಂಟ್ರೋಲ್ ಪಟ್ಟಿಯಲ್ಲಿ ಸೇರಿದ ಒಟ್ಟು 38 ಜನರ ಹೆಸರುಗಳೊಂದಿಗೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಕಳುಹಿಸಿದೆ. ಇವರೆಲ್ಲಾ ಲಷ್ಕರೆ ತೊಯ್ಬಾ ಉಗ್ರ ಸಂಘಟನೆಯಲ್ಲಿ ತೊಡಗಿಸಿಕೊಂಡವರೇ. ಸಯೀದ್ ನನ್ನು 90 ದಿನಗಳ ಕಾಲ ಗೃಹಬಂಧನದಲ್ಲಿ ಇಡಲು ಇತ್ತೀಚೆಗಷ್ಟೇ ಪಾಕ್ ಸರ್ಕಾರ ತೀರ್ಮಾನ ಕೈಗೊಂಡಿದೆ.

ಸಯೀದ್ ಮತ್ತು ಇತರ ಭಯೋತ್ಪಾದಕ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅಮೆರಿಕಾ ಸರ್ಕಾರದಿಂದ ತೀವ್ರ ಒತ್ತಡ ಬಂದ ಕಾರಣ ಪಾಕ್ ಈ ತೀರ್ಮಾನ ಕೈಗೊಂಡಿದೆ. ಮುಂಬೈ ದಾಳಿಯ ಸೂತ್ರಧಾರ ಸಯೀದ್ ನನ್ನು 2008 ರಲ್ಲಿ ಪಾಕ್ ಸರ್ಕಾರ ಗೃಹಬಂಧನದಲ್ಲಿ ಇಟ್ಟಿದ್ದರೂ 2009 ರಲ್ಲಿ ಅಲ್ಲಿನ ಕೊರ್ಟ್ ಬಿಡುಗಡೆ ಮಾಡಿತ್ತು.

ಇನ್ನು ತನ್ನನ್ನು ಗೃಹ ಬಂಧನದಲ್ಲಿಡಲು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಹಠ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಡವೇ ಕಾರಣ, ಪಾಕ್ ಅವರ ಒತ್ತಡಗಳಿಗೆ ಮಣಿದಿದೆ ಎಂದು ಹಫೀಜ್ ಸಯೀದ್ ಆರೋಪಿಸಿದ್ದಾನೆ.

English Summary: Two days after Pakistan placed UN sanctioned militant leader, Hafiz Saeed, under house arrest in Lahore, the Interior Ministry on Wednesday banned the JuD chief from travelling out of the country.

Related News

Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache