ಭಾರತಕ್ಕೆ ಹೀನಾಯ ಸೋಲು, ತೀವ್ರ ನಿರಾಸೆ ಮೂಡಿಸಿದ ಅಗ್ರ ಕ್ರಮಾಂಕದ ಆಟಗಾರರು – News Mirchi

ಭಾರತಕ್ಕೆ ಹೀನಾಯ ಸೋಲು, ತೀವ್ರ ನಿರಾಸೆ ಮೂಡಿಸಿದ ಅಗ್ರ ಕ್ರಮಾಂಕದ ಆಟಗಾರರು

ಲಂಡನ್: ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಭಾರತ ತಂಡ ಹೀನಾಯ ಸೋಲು ಕಂಡಿದೆ. ಭಾನುವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ನಡೆದ ಅಂತಿಮ ಹಣಾಹಣಿಯಲ್ಲಿ ಕೊಹ್ಲಿ ಸೇನೆ ಘೋರ ಸೋಲು ಕಂಡಿದೆ. ಪಂದ್ಯದುದ್ದಕ್ಕೂ ಹೋರಾಟದ ಸುಳಿವೇ ಕಾಣಿಸದೆ ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಮೂಡಿಸಿತು. ಕೊನೆಗೆ 180 ರನ್ ಗಳ ಅಂತರದಿಂದ ಪಾಕ್ ವಿರುದ್ಧ ಭಾರತ ತಂಡ ಸೋಲೊಪ್ಪಿಕೊಳ್ಳಬೇಕಾಯಿತು. [ಗಂಗೂಲಿ ಕಾರನ್ನು ಅಡ್ಡಗಟ್ಟಿ ದುರ್ವರ್ತನೆ ತೋರಿದ ಪಾಕಿಗಳು]

ಅಗ್ರ ಕ್ರಮಾಂಕದ ಆಟಗಾರರ ವೈಫಲ್ಯದ ಹೊಡೆತವನ್ನು ತಂಡ ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಒಬ್ಬ ಹಾರ್ಧಿಕ್ ಪಾಂಡ್ಯಾ(76; 43 ಎಸೆತಗಳುಲ್ಲಿ 4 ಫೋರ್, 6 ಸಿಕ್ಸರ್) ಹೊರತುಪಡಿಸಿ ಯಾರೊಬ್ಬರಿಂದಲೂ ಆಕರ್ಷಕ ಆಟ ಕಂಡು ಬರಲಿಲ್ಲ. ಇದೇ ಭಾರತದ ಗೆಲುವಿಗೆ ಮುಳುವಾಯಿತು. ಹಾರ್ಧಿಕ್ ನಂತರ ಬಂದ ಶಿಖರ್ ಧವನ್ (21), ಯುವರಾಜ್ ಸಿಂಗ್ (22), ರವೀಂದ್ರ ಜಡೇಜ್ಆ (15) ಮಾತ್ರ ಎರಡಂಕಿ ಗಳಿಸಿದರು. ರೋಹಿತ್ ಶರ್ಮ ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಡರೆ, ವಿರಾಟ್ ಕೊಹ್ಲಿ (5), ಎಂ.ಎಸ್.ಧೋನಿ (4), ಕೇದಾರ್ ಜಾದವ್ (9) ಈ ಪಂದ್ಯದಲ್ಲಿ ತೀವ್ರ ನಿರಾಸೆ ಮೂಡಿಸಿದರು. ಅದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಪಾಕಿಸ್ತಾನ, 339 ರನ್ ಗಳ ಬೃಹತ್ ಮೊತ್ತದ ಗುರಿಯನ್ನೇ ಭಾರತಕ್ಕೆ ನೀಡಿತ್ತು.

Loading...