ಕುಲಭೂಷಣ್ ಜಾಧವ್ ಅವರನ್ನು ಪಾಕ್ ನಲ್ಲಿ ಬಂಧಿಸಿಲ್ಲ : ಪಾಕ್ ಮಾಜಿ ಅಧಿಕಾರಿ – News Mirchi

ಕುಲಭೂಷಣ್ ಜಾಧವ್ ಅವರನ್ನು ಪಾಕ್ ನಲ್ಲಿ ಬಂಧಿಸಿಲ್ಲ : ಪಾಕ್ ಮಾಜಿ ಅಧಿಕಾರಿ

ಇಸ್ಲಾಮಾಬಾದ್: ಭಾರತದ ಮಾಜಿ ನೌಕಾಪಡೆಯ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ನಮ್ಮ ದೇಶದಲ್ಲಿಯೇ ಬಂಧಿಸಿದ್ದೇವೆ ಎಂದು ಹೇಳುತ್ತಿರುವ ಪಾಕಿಸ್ತಾನಕ್ಕೆ ಈ ಬಾರಿ ತಮ್ಮ ದೇಶದ ಮಾಜಿ ಅಧಿಕಾರಿಯೊಬ್ಬರ ಹೇಳಿಕೆ ನುಂಗಲಾರದ ತುತ್ತಾಗಿದೆ. ಈ ಮೂಲಕ ಜಾಧವ್ ಅವರನ್ನು ಪಾಕಿಸ್ತಾನ ಅಪಹರಿಸಿದೆ ಎಂಬ ಭಾರತದ ವಾದಕ್ಕೆ ಮತ್ತಷ್ಟು ಬಲ ಬಂದಿದೆ.

ಜಾಧವ್ ಅವರನ್ನು ಇರಾನ್ ನಲ್ಲಿ ಹಿಡಿದೆವು ಎಂದು ಪಾಕ್ ಗುಪ್ತಚರ ಸಂಸ್ಥೆ ಐಎಸ್ಐ ಮಾಜಿ ಅಧಿಕಾರಿ ಲೆಫ್ಟಿನೆಂಟ್ ಜನರಲ್ ಅಂಜಾದ್ ಶೋಯೆಬ್ ಬಹಿರಂಗಪಡಿಸಿದ್ದಾರೆ. ಜಾಧವ್ ಅವರನ್ನು ಪಾಕಿಸ್ತಾನದಲ್ಲಿ ಬಂಧಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪಾಕ್ ವಾದವೇನು?
ಕುಲಭೂಷಣ್ ಜಾಧವ್ ಅವರನ್ನು ಪಾಕ್ ನ ಬಲೂಚಿಸ್ತಾನದಲ್ಲಿ ಬಂಧಿಸಿದ್ದೇವೆ, ಇರಾನ್ ನಿಂದ ನಮ್ಮ ದೇಶಕ್ಕೆ ಬರಲು ಯತ್ನಿಸುತ್ತಿದ್ದಾಗ ಕಳೆದ ಮಾರ್ಚ್ 3 ರಂದು ಬಂಧಿಸಿದ್ದೇವೆ ಎಂದು ಪಾಕ್ ವಾದಿಸುತ್ತಿದೆ.

ಇದೀಗ ಪಾಕ್ ಮಾಜಿ ಐಎಸ್ಐ ಅಧಿಕಾರಿಯೇ ಪಾಕ್ ವಾದ ಸುಳ್ಳು ಎಂದು ಹೇಳುತ್ತಿರುವುದು ಪಾಕಿಸ್ತಾನದ ವಾದಕ್ಕೆ ಹಿನ್ನೆಡೆಯಾಗಿದೆ. ಕುಲಭೂಷಣ್ ಜಾಧವ್ ಗೆ ಪಾಕ್ ಮಿಲಿಟರಿ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದ್ದು, ಅದನ್ನು ವಿರೋಧಿಸಿ ಭಾರತ ಅಂತರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿತ್ತು. ಎರಡೂ ದೇಶಗಳ ವಾದಗಳನ್ನು ಆಲಿಸಿದ ಅಂತರಾಷ್ಟ್ರೀಯ ನ್ಯಾಯಾಲಯ, ಅಂತಿಮ ತೀರ್ಪು ನೀಡುವವರೆಗೂ ಕುಲಭೂಷಣ್ ಜಾಧವ್ ಗೆ ಗಲ್ಲು ಶಿಕ್ಷೆ ಜಾರಿ ಮಾಡದಂತೆ ಪಾಕಿಸ್ತಾನಕ್ಕೆ ಸೂಚಿಸಿದೆ.

Loading...