ಭಾರತದ ಈ ಒಪ್ಪಂದದಿಂದ ಹೆದರುತ್ತಿರುವ ಪಾಕ್…

View Later

ಈಗಾಗಲೇ ಪಾಕಿಸ್ತಾನದ ವಿಷಯದಲ್ಲಿ ಅಮೆರಿಕ ಕಠಿಣ ನಿಲುವು ತಾಳಿದ್ದು, ಇದೀಗ ಅಮೆರಿಕ ಕೈಗೊಂಡ ಹೊಸ ತೀರ್ಮಾನಕ್ಕೆ ಪಾಕಿಸ್ತಾನ ಮತ್ತಷ್ಟು ಹೆದರಿದೆ. ಅದೂ ಕೂಡಾ ಭಾರತಕ್ಕೆ ಸಂಬಂಧಿಸಿದ ವಿಷಯವಾದ್ದರಿಂದ ಪಾಕ್ ಆತಂಕ ಮತ್ತಷ್ಟು ಹೆಚ್ಚಲು ಕಾರಣವಾಗಿದೆ.

ಸುಮಾರು 2 ರಿಂದ 3 ಶತಕೋಟಿ ಡಾಲರ್ ವೆಚ್ಚದ ಅತ್ಯಾಧುನಿಕ ತಂತ್ರಜ್ಞಾನದ 22 ಪ್ರಿಡೇಟರ್ ಡ್ರೋನ್ ಗಳನ್ನು ಭಾರತಕ್ಕೆ ಮಾರಾಟ ಮಾಡಲು ಜೂನ್ ನಲ್ಲಿ ಅಮೆರಿಕಾ ಕೈಗೊಂಡ ನಿರ್ಧಾರ ಪಾಕ್ ಆತಂಕಕ್ಕೆ ಕಾರಣವಂತೆ.

ಭದ್ರತೆಗೆ ಸಂಬಂಧಿಸಿದಂತೆ ನಿರಂತರವಾಗಿ ಕಣ್ಗಾವಲಿಟ್ಟು ಎಚ್ಚರಿಕೆಗಳನ್ನು ನೀಡುವ ಡ್ರೋನ್ ಗಳು ಅವುಗಳಾಗಿದ್ದು, ಇವುಗಳನ್ನು ಭಾರತವು ಸಬ್ ಮರೀನ್ ಗಳಿಗೆ ಬಳಸಿಕೊಳ್ಳುತ್ತವೆ ಎಂದು ಅಲ್ಲಿನ ಮಾಧ್ಯಮಗಳು ಆತಂಕ ವ್ಯಕ್ತಪಡಿಸಿವೆ.

ವಾರಾಂತ್ಯದ ಸಭೆಯಲ್ಲಿ ಪಾಕ್ ವಿದೇಶಾಂಗ ವ್ಯವಹಾರಗಳ ಅಧಿಕೃತ ವಕ್ತಾರ ನಫೀಜ್ ಜಕಾರಿಯಾ ಮಾತನಾಡುತ್ತಾ, ಕಳೆದ ಜೂನ್ ನಲ್ಲಿ ಮೋದಿ ಅವರ ಅಮೆರಿಕಾ ಪ್ರವಾಸದ ಅಂಶಗಳನ್ನು ಪ್ರಮುಖವಾಗಿ ಅವರು ಪ್ರಸ್ತಾಪಿಸಿದರು. ಅತ್ಯಂತ ಮಹತ್ವಾಕಾಂಕ್ಷೆಯೊಂದಿಗೆ ಮೋದಿ ಅಮೆರಿಕದೊಂದಿಗೆ ಈ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಹೇಳಿದ ಜಕಾರಿಯಾ, ಜಲಾಂತರ್ಗಾಮಿಗಳಿಗಾಗಿ ಬಳಸುವ 22 ಡ್ರೋನ್ ಗಳ ಒಪ್ಪಂದವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

[ಇದನ್ನೂ ಓದಿ:ಪರಮಾಣು ಕ್ಷಿಪಣಿ ಬರ್ತಿದೆ ಓಡಿ ಓಡಿ… ಬಚ್ಚಿಟ್ಟುಕೊಳ್ಳಿ.. ನಡುಗಿದ ಜಪಾನೀಯರು]

ಈ ಒಪ್ಪಂದದಿಂದಾಗಿ ಭಾರತದ ಎದುರು ಪಾಕಿಸ್ತಾನ ಶಕ್ತಿ ಕುಗ್ಗಿದಂತಾಗುತ್ತದೆ ಎಂದು ಅವರು ಹೇಳಿದರು. ನಾವು ಈಗಾಗಲೇ ಭಾರತಕ್ಕೆ ಅತ್ಯಾಧುನಿಕ ಮಿಲಿಟರಿ ತಂತ್ರಜ್ಞಾನವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದೇವೆ. ಹಾಗೆ ಮಾಡುವ ಮೂಲಕ, ದಕ್ಷಿಣ ಏಷ್ಯಾದಲ್ಲಿ ಅಸ್ಥಿರತೆ ಎದುರಾಗಲಿದೆ ಎಂದು ನಾವು ಹೇಳಿದ್ದೇವೆ ಎಂದರು.

Get Latest updates on WhatsApp. Send ‘Add Me’ to 8550851559